ಕಿಮರ್ತ್ಥಂ ರೋದಿಷೀತ್ಯೇವ ಸಾsಬ್ರವೀದ್ ವಟುರೂಪಿಣಮ್ ।
ಶಙ್ಕರಂ ದರ್ಶಯಿತ್ವೈವ ಪಞ್ಚಭರ್ತ್ತೃತ್ವಮೇಷ ಮೇ ॥೧೮.೧೩೭॥
ವರಾರ್ತ್ಥಮರ್ತ್ಥಿತಃ ಪ್ರಾದಾದಿತಿ ತಂ ಶಿವ ಇತ್ಯಥ ।
ಅಜಾನನ್ ಶಕ್ರ ಆಹೋಚ್ಚೈಃ ಕಿಮೇತದ್ ಭುವನತ್ರಯೇ ॥೧೮.೧೩೮॥
‘ಏಕಾಗಿ ಅಳುವೇ’ ಎಂದು ಕೇಳಿದ ದೇವೇಂದ್ರನಿಗೆ ಅವಳು, ಅಲ್ಲಿದ್ದ
ವಟುರೂಪಿ ಶಂಕರನನ್ನು ತೋರಿಸಿ, ‘ಇವನಲ್ಲಿ ವರವನ್ನು ಬೇಡಿಕೊಂಡರೆ, ಐದು ಜನ
ಗಂಡಂದಿರಾಗಲಿ ಎಂದು ವರವನ್ನು ನೀಡಿದ’ ಎಂದಳು. ಆಗ ವಟುರೂಪದಲ್ಲಿರುವವನನ್ನು ಶಿವನೆಂದು
ಗುರುತಿಸದ ಇಂದ್ರ ಗಟ್ಟಿಯಾಗಿ ಮಾತನಾಡಿದ.
ಮತ್ಪಾಲಿತೇ ಯೋಷಿತಂ ತ್ವಂ ವೃಥಾ ಶಪಸಿ ದುರ್ಮ್ಮತೇ ।
ಇತೀರಿತೇ ಶಿವಃ ಪ್ರಾಹ ಪತ ಮಾನುಷ್ಯಮಾಪ್ನುಹಿ ॥೧೮.೧೩೯॥
ಅಸ್ಯಾಶ್ಚ ಭರ್ತ್ತಾ ಭವಸಿ ತ್ವಾಮೇವೈಷಾ ವರಿಷ್ಯತಿ ।
ಪಶ್ಯಾತ್ರ ಮದವಜ್ಞಾನಾತ್ ಪತಿತಾಂಸ್ತ್ವಾದೃಶಾನ್ ಸುರಾನ್ ॥೧೮.೧೪೦॥
ಗಿರೇರಧಸ್ತಾದಸ್ಯೈವೇತ್ಯುಕ್ತೋsಸೌ ಪಾಕಶಾಸನಃ ।
ಉದ್ಬಬರ್ಹ ಗಿರಿಂ ತಂ ತು ದದರ್ಶಾತ್ರ ಚ ತಾನ್ ಸುರಾನ್ ॥೧೮.೧೪೧॥
‘ನಾನು ಈ ಮೂರುಲೋಕದ ರಾಜ. ನನ್ನ ಆಳ್ವಿಕೆಯಲ್ಲಿ ಒಂದು ಹೆಣ್ಣಿಗೆ ದುರ್ಮತಿಯಾಗಿ ಶಪಿಸಿರುವೆಯಲ್ಲಾ’ ಎಂದು ದೇವೇಂದ್ರ ಏರಿದ ಧ್ವನಿಯಲ್ಲಿ ಕೇಳಿದಾಗ,
ಶಿವನು : ‘ನೀನೂ ಕೂಡಾ ಮನುಷ್ಯನಾಗು’ ಎಂದು
ಇಂದ್ರನನ್ನು ಶಪಿಸಿದನು.
‘ನೀನೂ ಇವಳ ಗಂಡನೇ ಆಗುತ್ತೀಯಾ. ನನ್ನನ್ನು ಅವಮಾನ
ಮಾಡಿದ್ದರಿಂದ^ ನಿನ್ನಂತಹ ಇತರ ದೇವತೆಗಳು ಅಲ್ಲಿ
ಪರ್ವತದ ಕೆಳಗೆ ಬಿದ್ದಿದ್ದಾರೆ ನೋಡು’ ಎನ್ನುತ್ತಾನೆ ಶಿವ.
‘ಇದೇ ಪರ್ವತದ ಕೆಳಗೆ ಅವರೆಲ್ಲಾ ಯೋಚನೆ ಮಾಡುತ್ತಿದ್ದಾರೆ’
ಎಂದು ಶಿವನಿಂದ ಹೇಳಲ್ಪಟ್ಟಾಗ, ಪಾಕಶಾಸನನಾದ (ಪಾಕನೆಂಬ ಅಸುರನನ್ನು ಕೊಂದ) ಇಂದ್ರನು ಬೆಟ್ಟವನ್ನು ತೆಗೆದು ನೋಡಿದ
ಮತ್ತು ಅಲ್ಲಿ ಆ ದೇವತೆಗಳನ್ನು ಕಂಡ ಕೂಡಾ.
ಪೂರ್ವೇನ್ದ್ರಾನ್ ಮಾರುತವೃಷನಾಸತ್ಯಾಂಶ್ಚತುರಃ ಸ್ಥಿತಾನ್ ।
ಮಾನುಷೇಷ್ವವತಾರಾಯ ಮನ್ತ್ರಂ ರಹಸಿ ಕುರ್ವತಃ ॥೧೮.೧೪೨॥
ತತೋ ವರೇಣ್ಯಂ ವರದಂ ವಿಷ್ಣುಂ ಪ್ರಾಪ್ಯ ಸ ವಾಸವಃ ।
ತತ್ಪ್ರಸಾದಾನ್ನರಾಂಶೇನ ಯುಕ್ತೋ ಭೂಮಾವಜಾಯತ ॥೧೮.೧೪೩॥
ಪೂರ್ವ ಮನ್ವಂತರದಲ್ಲಿ ಇಂದ್ರರಾದ ವಾಯು, ಯಮ, ಮತ್ತು ಅಶ್ವಿನೀದೇವತೆಗಳಿಬ್ಬರಿಂದ ಕೂಡಿದ ನಾಲ್ವರನ್ನು ಇಂದ್ರ ನೋಡಿದ. ಅವರು ಮುಂದೆ ಮನುಷ್ಯರಾಗಿ ಹುಟ್ಟುವುದರ
ಕುರಿತು ಅಲ್ಲಿ ಮಂತ್ರಾಲೋಚನೆ ಮಾಡುತ್ತಿದ್ದರು.
ಈರೀತಿ ಶಿವನಿಂದ ಶಾಪಗ್ರಸ್ಥನಾದ ಇಂದ್ರನು ತದನಂತರ, ಉತ್ಕೃಷ್ಟನೂ, ವರಪ್ರದನೂ ಆದ ವಿಷ್ಣುವನ್ನು ಹೊಂದಿ, ಅವನ ಅನುಗ್ರಹದಿಂದ, ಭಗವಂತನ ನರಾವೇಶದಿಂದ ಕೂಡಿಕೊಂಡು ಭೂಮಿಯಲ್ಲಿ ಹುಟ್ಟಿದನು.
[^ಆ ನಾಲ್ವರು ದೇವತೆಗಳು ಮನುಷ್ಯರಲ್ಲಿ ಅವತಾರ ಮಾಡಲು ಪರ್ವತದ
ಕೆಳಗೆ ಮಂತ್ರಾಲೋಚನೆ ಮಾಡುತ್ತಿದ್ದರೇ ವಿನಃ, ರುದ್ರದೇವರಿಗೆ ಅವಮಾನ ಮಾಡಿ ಕೆಳಗೆ ಬಿದ್ದಿರಲಿಲ್ಲ.
ಹಾಗಾಗಿ ಶಿವನಿಂದ ನುಡಿಯಲ್ಪಟ್ಟ ಆ ಮಾತು ಮಿಥ್ಯವಾಗಿತ್ತು ಮತ್ತು ಅದು ಬ್ರಹ್ಮದೇವರ ಕೋಪಕ್ಕೆ
ಕಾರಣವಾಗಿ ಅವರು ಶಿವನಿಗೆ ಶಾಪ ನೀಡಲು ಕಾರಣವಾಯಿತು].
No comments:
Post a Comment