ಏವಂ ಬ್ರುವತ್ಯಪಿ ನೃಪೇ ಪುನರಾಹ ಪಾಪ ಆಶ್ರಿತ್ಯ ಸೌಬಲಮತಂ ಯದಿ
ನೈವ ಪಾರ್ತ್ಥಾನ್ ।
ಅನ್ಯತ್ರ ಯಾಪಯಸಿ ನಾಗಪುರಾತ್ ಪರೇತಾನ್ ದೃಷ್ಟ್ವಾsಖಿಲಾನಪಿ ಹಿ ನೋ ಮುದಮೇಹಿ ಪಾರ್ತ್ಥೈಃ ॥೧೯.೧೧॥
ಈರೀತಿಯಾಗಿ ಧೃತರಾಷ್ಟ್ರನು ಮಗನಿಗೆ ಹೇಳಿದರೂ ಕೂಡಾ, ಪಾಪಿಷ್ಠನಾದ ಆ ದುರ್ಯೋಧನನು ಶಕುನಿಯ ಅಭಿಪ್ರಾಯವನ್ನು
ಆಶ್ರಯಿಸಿ ಹೇಳುತ್ತಾನೆ: ‘ಒಂದುವೇಳೆ ಪಾಣ್ಡವರನ್ನು ಹಸ್ತಿನಾವತಿಯಿಂದ ಬೇರೆಡೆಗೆ
ಕಳುಹಿಸದಿದ್ದರೆ ನಾವೆಲ್ಲರೂ ಸಾಯುತ್ತೇವೆ, ಸತ್ತ ನಮ್ಮೆಲ್ಲರನ್ನು ನೋಡಿ, ಪಾಣ್ಡವರ ಜೊತೆ ನೀನು ಸಂತೋಷವನ್ನು ಹೊಂದು’ ಎಂದು.
ಏವಂ ನಿಶಮ್ಯ ಗದಿತಂ ಸುತಹಾರ್ದ್ದಪಾಶೈರಾಕೃಷ್ಯತಾsಶು ಸ ನೃಪೋsರಿಧರೇಚ್ಛಯೈವ ।
ಪ್ರೋವಾಚ ಪುತ್ರಮಪಿ ತೇ ಬಲಿನೋ ನ ಪಾರ್ತ್ಥಾಃ ಶಕ್ಯಾಃ ಪುರಾತ್
ತನಯ ಯಾಪಯಿತುಂ ಕಥಞ್ಚಿತ್॥೧೯.೧೨॥
ಈರೀತಿಯಾಗಿ ದುರ್ಯೋಧನನಾಡಿದ ಮಾತನ್ನು ಕೇಳಿದ ಧೃತರಾಷ್ಟ್ರನು,
ಪರಮಾತ್ಮನ ಇಚ್ಛೆಯಂತೇ, ‘ಮಗನಮೇಲಿನಪ್ರೀತಿ’ ಎಂಬ ಹಗ್ಗದಿಂದ ಕೂಡಲೇ ಸೆಳೆಯಲ್ಪಟ್ಟನು(ಮಗನ
ಅಧೀನನಾದನು) ಹಾಗೂ ದುರ್ಯೋಧನನನ್ನು ಕುರಿತು ಹೇಳುತ್ತಾನೆ: ‘ಪಾಣ್ಡವರು ಬಲಿಷ್ಠರು. ಪಟ್ಟಣದಿಂದ
ಹೊರಗಡೆ ತೆರಳಲು ಅವರು ಶಕ್ಯರಲ್ಲ’.(ಅವರನ್ನು ನಗರದಿಂದ ಹೊರಹಾಕಲು ಸಾಧ್ಯವಿಲ್ಲ) ಎಂದು,.
ಇತ್ಯುಕ್ತ ಆಹ ಪಿತರಂ ಶಕುನಿಂ ನಿರೀಕ್ಷ್ಯ ಸೃಷ್ಟೋ ಮಯಾ
ವಿಧಿರಿಹಾದ್ಯ ಶೃಣುಷ್ವ ತಂ ಚ ।
ಆಸಂಸ್ತ್ರಯೋದಶ ಸಮಾ ನಗರಂ ಪ್ರವಿಷ್ಟೇಷ್ವೇತೇಷು ತಾವದಯಮೇವ
ವಿಧಿರ್ಮ್ಮಯೇಷ್ಟಃ॥೧೯.೧೩ ॥
ಈರೀತಿಯಾಗಿ ಧೃತರಾಷ್ಟ್ರನಿಂದ ಹೇಳಲ್ಪಟ್ಟಾಗ, ಆ ದುರ್ಯೋಧನನು
ಶಕುನಿಯನ್ನು ನೋಡುತ್ತಾ, ತಂದೆಯನ್ನು ಕುರಿತು ಹೇಳುತ್ತಾನೆ: ‘ಅಪ್ಪಾ, ಪಾಣ್ಡವರನ್ನು ಹೊರ ದಬ್ಬುವ ವಿಚಾರದಲ್ಲಿ ನನ್ನಿಂದ ಒಂದು ಉಪಾಯವು
ಸೃಷ್ಟಿಸಲ್ಪಟ್ಟಿದೆ. ಆ ಉಪಾಯ ಏನೆಂಬುದನ್ನು ಕೇಳು. ಪಾಂಡವರು ನಗರವನ್ನು ಪ್ರವೇಶಮಾಡಿ ಇದೀಗ ಹದಿಮೂರು
ವರ್ಷಗಳಾಯಿತು. ಅಂದಿನಿಂದಲೂ ಈ ಉಪಾಯವು ನನ್ನಿಂದ ಯೋಚಿಸಲ್ಪಟ್ಟಿದೆ.
ದ್ರೌಣೇರ್ಹಿ ನಾಸ್ತಿ ಸದೃಶೋ ಬಲವಾನ್ ಪ್ರತಾಪೀ ಸೋsಯಂ ಮಯಾ ಬಹುವಿಧೈಃ ಪರಮೈರುಪಾಯೈಃ ।
ನೀತೋ ವಶಂ ವಶಗತೋsಸ್ಯ ಚ ಮಾತುಲೇನ ಸಾಕಂ ಪಿತಾ ತಮನು ಚೈಷ ನದೀಪ್ರಸೂತಃ ॥೧೯.೧೪॥
ಅಶ್ವತ್ಥಾಮನಿಗಿಂತ ಮಿಗಿಲಾದ ಅಥವಾ ಎಣಿಯಿರುವ ಪ್ರತಾಪಿ
ಇನ್ನೊಬ್ಬನಿಲ್ಲ. ಆ ದ್ರೌಣಿ ನನ್ನ ಅನೇಕ ಉಪಾಯಗಳಿಂದ ಅವನ ಸೋದರಮಾವನ(ಕೃಪಾಚಾರ್ಯರ) ಜೊತೆಗೆ ನನ್ನ
ವಶಕ್ಕೆ ಸಿಕ್ಕಿದ್ದಾನೆ. ಅವನನ್ನು ಅನುಸರಿಸಿ ಅವರಪ್ಪ ದ್ರೋಣಾಚಾರ್ಯರೂ ಬರುತ್ತಾರೆ, ಭೀಷ್ಮರೂ
ಬರುತ್ತಾರೆ.
ಏವಂ ಹಿ ಸೈನಿಕಗಣಾ ಅಪಿ ದಾನಮಾನೈಃ ಪ್ರಾಯೋ ವಶಂ ಮಮ ಗತಾ ಅಪಿ ಚೈಷ
ಕರ್ಣ್ಣಃ ।
ಅಸ್ತ್ರೇ ಬಲೇsಪ್ಯಧಿಕ ಏವ ಸುರೇನ್ದ್ರಸೂನೋರ್ಜ್ಜ್ಯೇಷ್ಯೇ ಚ ಮನ್ತ್ರಬಲತಸ್ತ್ವಹಮೇವ
ಭೀಮಮ್॥೧೯.೧೫॥
ಹಾಗೆಯೇ ಸೈನಿಕರೆಲ್ಲರೂ ಕೂಡಾ. ಅವರಿಗೆ ವಿಶೇಷ ಅನುದಾನ ಕೊಡುವ
ಮೂಲಕ ಎಲ್ಲರೂ ನನ್ನ ವಶವಾಗಿದ್ದಾರೆ. ಅಸ್ತ್ರದಲ್ಲಿ, ಬಲದಲ್ಲಿ
ಅರ್ಜುನನಿಗಿಂತ ಮಿಗಿಲಾದ ಕರ್ಣ ಅರ್ಜುನನನ್ನು ಗೆಲ್ಲುತ್ತಾನೆ. ಮಂತ್ರದ
ಬಲದಿಂದ ನಾನು ಭೀಮನನ್ನು ಗೆಲ್ಲುತ್ತೇನೆ.
No comments:
Post a Comment