ಹತ್ವೈವ ಶರ್ವವರರಕ್ಷಿತರಾಕ್ಷಸಂ ತಂ ಸರ್ವೈರವದ್ಧ್ಯಮಪಿ ಸೋದರಮಾತೃಯುಕ್ತಃ
।
ಭೀಮೋ ಯಯೌ ತಮನು ಸಾ ಪ್ರಯಯೌ ಹಿಡಿಮ್ಬೀ ಕುನ್ತೀಂ
ಯುಧಿಷ್ಠಿರಮಥಾಸ್ಯ ಕೃತೇ ಯಯಾಚೇ ॥೧೯.೫೭॥
ರುದ್ರನ ವರದಿಂದ ರಕ್ಷಿತನಾದ, ಎಲ್ಲರಿಂದ ಅವಧ್ಯನಾದ ಆ ರಾಕ್ಷಸ
ಹಿಡಿಮ್ಬನನ್ನು ಕೊಂದ ಭೀಮಸೇನ, ತಾಯಿ ಮತ್ತು
ಸಹೋದರರಿಂದ ಕೂಡಿಕೊಂಡು ಮುಂದೆ ನಡೆದನು. ಹಿಡಿಮ್ಬೀಯೂ ಕೂಡಾ ಅವನನ್ನು ಅನುಸರಿಸಿ ನಡೆದಳು. ಅವಳು
ಕುಂತಿಯನ್ನೂ, ಯುಧಿಷ್ಠಿರನನ್ನೂ ಭೀಮಸೇನನಿಗಾಗಿ
ಬೇಡಿದಳು.
ತಾಭ್ಯಾಮನೂಕ್ತಮಪಿ
ಯನ್ನ ಕರೋತಿ ಭೀಮಃ ಪ್ರಾದುರ್ಬಭೂವ ನಿಖಿಲೋರುಗುಣಾಭಿಪೂರ್ಣ್ಣಃ ।
ವ್ಯಾಸಾತ್ಮಕೋ ಹರಿರನನ್ತಸುಖಾಮ್ಬುರಾಶಿರ್ವಿದ್ಯಾಮರೀಚಿವಿತತಃ
ಸಕಲೋತ್ತಮೋsಲಮ್॥೧೯.೫೮॥
ಯುಧಿಷ್ಠಿರ ಮತ್ತು ಕುಂತಿಯಿಂದ ಪದೇಪದೇ ಹೇಳಲ್ಪಟ್ಟ ಮಾತನ್ನು ಭೀಮನು
ಯಾವ ಕಾರಣದಿಂದ ಮಾಡಲಿಲ್ಲವೋ, ಆಕಾರಣದಿಂದ, ಎಲ್ಲಾ ಗುಣಗಳಿಂದ ತುಮ್ಬಿದವನಾದ, ವೇದವ್ಯಾಸರೂಪಿಯಾದ,
ಎಣೆಯಿರದ ಸುಖದ ಕಡಲಿನಂತಿರುವ, ವಿದ್ಯೆಯೆಂಬ ಬೆಳಕಿನಿಂದ ತುಂಬಿರುವ ಸರ್ವೋತ್ತಮನಾದ ನಾರಾಯಣನು
ಅಲ್ಲಿ ಕಾಣಿಸಿಕೊಂಡ.
ದೃಷ್ಟ್ವೈವ ತಂ ಪರಮಮೋದಿನ ಆಶು ಪಾರ್ತ್ಥಾ ಮಾತ್ರಾ ಸಹೈವ
ಪರಿಪೂಜ್ಯ ಗುರುಂ ವಿರಿಞ್ಚೇಃ।
ಉಲ್ಲಾಳಿತಾಶ್ಚ
ಹರಿಣಾ ಪರಮಾತಿಹಾರ್ದ್ದಪ್ರೋತ್ಫುಲ್ಲಪದ್ಮನಯನೇನ ತದೋಪವಿಷ್ಟಾಃ ॥೧೯.೫೯॥
ತಾಯಿಯ ಜೊತೆಗೆ ಭಗವಂತನನ್ನು ಕಂಡು ಬಹಳ ಸಂತಸಗೊಂಡ ಪಾಂಡವರು, ಬ್ರಹ್ಮದೇವರಿಗೂ
ಉಪದೇಶಕನಾದ ವೇದವ್ಯಾಸರನ್ನು ಪೂಜಿಸಿ,
ಪರಮಾತ್ಮನಿಂದ ಅತ್ಯಂತ ಸ್ನೇಹದ ಅರಳಿದ
ಕಣ್ಣುಗಳಿಂದ ಪ್ರೀತಿಸಲ್ಪಟ್ಟ ಅವರೆಲ್ಲರೂ ಕೂಡಾ, ಪರಮಾತ್ಮನ ಬಳಿ
ಕುಳಿತರು.
ತಾನ್ ಭಕ್ತಿನಮ್ರಶಿರಸಃ ಸಮುದೀಕ್ಷ್ಯ ಕೃಷ್ಣೋ ಭೀಮಂ ಜಗಾದ ನತ
ಆಶು ಹಿಡಿಮ್ಬಯಾ ಚ ।
ಏತಾಂ ಗೃಹಾಣ ಯುವತೀಂ
ಸುರಸದ್ಮಶೋಭಾಂ ಜಾತೇ ಸುತೇ ಸಹಸುತಾ ಪ್ರತಿ ಯಾತು ಚೈಷಾ ॥೧೯.೬೦॥
ಭಕ್ತಿಯಿಂದ ಬಾಗಿದ ಶಿರವುಳ್ಳ ಅವರನ್ನು ಕಂಡ ವೇದವ್ಯಾಸರು, ಹಿಡಿಮ್ಬೀಯಿಂದಲೂ
ನಮಸ್ಕರಿಸಲ್ಪಟ್ಟವರಾಗಿ, ಭೀಮಸೇನನನ್ನು ಕುರಿತು ಹೀಗೆ ಹೇಳಿದರು: ‘ದೇವತೆಯಂತೆ ತೋರುತ್ತಿರುವ ಈ
ಯುವತಿಯನ್ನು ಗ್ರಹಿಸು. (ಮದುವೆಯಾಗು). ಮಗು ಹುಟ್ಟಿದ ಕೂಡಲೇ ಮಗನಿಂದ ಕೂಡಿಕೊಂಡು ಇವಳು ತೆರಳಲಿ’
ಎಂದು.
ಏವಂ ಬ್ರುವತ್ಯಗಣಿತೋರುಗುಣೇ ರಮೇಶ ಓಮಿತ್ಯುದೀರ್ಯ್ಯ
ಕೃತವಾಂಶ್ಚ ತಥೈವ ಭೀಮಃ ।
ಸ್ಕನ್ಧೇನ ಚೋಹ್ಯ ವಿಬುಧಾಚರಿತಪ್ರದೇಶಾನ್ ಭೀಮಂ ಪ್ರಯಾತ್ಯುದಯ ಏವ ರವೇರ್ಹಿಡಿಮ್ಬೀ ॥೧೯.೬೧॥
ಈರೀತಿಯಾಗಿ ಎಣಿಯಿರದ ಗುಣಗಳುಳ್ಳ ರಮೇಶನು ಹೇಳುತ್ತಿರಲು,
ಭೀಮಸೇನನು ‘ಓಂ’ (ಆಯಿತು ) ಎಂದು ಹೇಳಿ, ವ್ಯಾಸರು ಹೇಳಿದಂತೆ ಮಾಡಿದ ಕೂಡಾ. ಹಿಡಿಮ್ಬೀಯು ಸೂರ್ಯ ಉದಯವಾಗುತ್ತಿದ್ದಂತೆಯೇ ಭೀಮಸೇನನ ಹೆಗಲನ್ನು ಏರಿ, ದೇವತೆಗಳು ಓಡಾಡುವ ಪ್ರದೇಶಗಳನ್ನೆಲ್ಲಾ ವಿಹರಿಸುತ್ತಿದ್ದಳು.
ಸಾ ನನ್ದನಾದಿಷು ವನೇಷು ವಿಹೃತ್ಯ ತೇನ ಸಾಯಂ ಪ್ರಯಾತಿ ಪೃಥಯಾ
ಸಹಿತಾಂಶ್ಚ ಪಾರ್ತ್ಥಾನ್ ।
ಏವಂ ಯಯಾವಪಿ ತಯೋರಿಹ ವತ್ಸರಾರ್ದ್ಧೋ ಜಾತಶ್ಚ ಸೂನುರತಿವೀರ್ಯ್ಯಬಲೋಪಪನ್ನಃ
॥೧೯.೬೨॥
ಹಿಡಿಮ್ಬೀಯು ದೇವತೆಗಳ ಉದ್ಯಾನವಾದ ನಂದನವನ ಮೊದಲಾದೆಲ್ಲೆಡೆ
ವಿಹರಿಸಿ, ಸಾಯಂಕಾಲವಾಗುತ್ತಿದ್ದಂತೆಯೇ ಕುಂತಿಯಿಂದ
ಕೂಡಿರುವ ಪಾಂಡವರನ್ನು ಕುರಿತು ಬರುತ್ತಿದ್ದಳು. ಈರೀತಿಯಾಗಿ ಅವರಿಬ್ಬರ ನಡುವೆ ಆರುತಿಂಗಳ
ದಾಂಪತ್ಯ ಕಳೆಯಿತು ಮತ್ತು ಮುಂದೆ ಅತ್ಯಂತ ವೀರ್ಯ ಹಾಗೂ ಬಲದಿಂದ ಕೂಡಿದ ಮಗನೂ ಹುಟ್ಟಿದನು.
No comments:
Post a Comment