ಸ್ವಂಸ್ವಂ ಚ ಸರ್ವೇ ಸದನಂ ಸುರಾ
ಯಯುಃ ಪುರನ್ದರಾದ್ಯಾಶ್ಚ ವಿರಿಞ್ಚಪೂರ್ವಕಾಃ ।
ಮರುತ್ಸುತೋsಥೋ ಬದರೀಮವಾಪ್ಯ ನಾರಾಯಣಸ್ಯೈವ ಪದಂ
ಸಿಷೇವೇ ॥೯.೧೧೯॥
ಸಮಸ್ತಶಾಸ್ತ್ರೋದ್ಭರಿತಂ ಹರೇರ್ವಚೋ
ಮುದಾ ತದಾ ಶ್ರೋತ್ರಪುಟೇನ ಸಮ್ಭರನ್ ।
ವದಂಶ್ಚ ತತ್ವಂ ವಿಬುಧರ್ಷಭಾಣಾಂ ಸದಾ
ಮುನೀನಾಂ ಚ ಸುಖಂ ಹ್ಯುವಾಸ॥೯.೧೨೦ ॥
ಬ್ರಹ್ಮ, ಇಂದ್ರ, ಮೊದಲಾದ ದೇವತೆಗಳೆಲ್ಲರೂ ತಮ್ಮ-ತಮ್ಮ ಧಾಮವನ್ನು
ಸೇರಿದರು. ತದನಂತರ ಹನುಮಂತನು ಬದರೀ ಕ್ಷೇತ್ರವನ್ನು ಹೊಂದಿ, ನಾರಾಯಣನ ಪಾದವನ್ನು ಸೇವಿಸುತ್ತಿದ್ದನು.
ಸಮಗ್ರ ಶಾಸ್ತ್ರದಿಂದ ಕೂಡಿರುವ ಪರಮಾತ್ಮನ ಮಾತನ್ನು ಸಂತಸದಿಂದ ತನ್ನ
ಕಿವಿಯಲ್ಲಿ ಧರಿಸುತ್ತಾ, ದೇವತಾ ಶ್ರೇಷ್ಠ ತತ್ವವನ್ನು ಹೇಳುತ್ತಾ, ಮುನಿಗಳಿಗೂ ಕೂಡಾ
ಉಪದೇಶಿಸುತ್ತಾ, ಹನುಮಂತ ಸುಖವಾಗಿ ಆವಾಸ ಮಾಡಿದನು.
ರಾಮಾಜ್ಞಯಾ ಕಿಮ್ಪುರುಷೇಷು ರಾಜ್ಯಂ
ಚಕಾರ ರೂಪೇಣ ತಥಾsಪರೇಣ।
ರೂಪೈಸ್ತಥಾsನ್ಯೈಶ್ಚ ಸಮಸ್ತಸದ್ಮನ್ಯುವಾಸ
ವಿಷ್ಣೋಃ ಸತತಂ ಯಥೇಷ್ಟಮ್ ॥೯.೧೨೧॥
ರಾಮದೇವರ ಆಜ್ಞೆಯಂತೆ ಹನುಮಂತನೇ ತನ್ನ ಇನ್ನೊಂದು ರೂಪದಿಂದ ಕಿಮ್ಪುರುಷಖಂಡದಲ್ಲಿ ರಾಜ್ಯವನ್ನು ಆಳಿದನು. ಬೇರೆ
ರೂಪಗಳಿಂದಲೂ ಕೂಡಾ ಶ್ವೇತದ್ವೀಪ, ಮೊದಲಾದ ಪರಮಾತ್ಮನ ಮನೆಯಲ್ಲಿ ನಿರಂತರವಾಗಿ, ಪರಮಾತ್ಮನ
ಇಷ್ಟಕ್ಕನುಗುಣವಾಗಿ ವಾಸಮಾಡಿದನು.
ಇತ್ಥಂ ಸ ಗಾಯಞ್ಚತಕೋಟಿವಿಸ್ತರಮ್
ರಾಮಾಯಣಂ ಭಾರತಪಞ್ಚರಾತ್ರಮ್ ।
ವೇದಾಂಶ್ಚ ಸರ್ವಾನ್
ಸಹಿತಬ್ರಹ್ಮಸೂತ್ರಾನ್ ವ್ಯಾಚಕ್ಷಾಣೋ ನಿತ್ಯಸುಖೋದ್ಭರೋsಭೂತ್ ॥೯.೧೨೨
॥
ಈರೀತಿಯಾಗಿ, ಹನುಮಂತನು ನೂರುಕೋಟಿ ಪದ್ಯಗಳಿಂದ ವಿಸ್ತಾರವಾಗಿರುವ
ರಾಮಾಯಣವನ್ನು, ಮಹಾಭಾರತ- ಪಂಚರಾತ್ರಗಳನ್ನೂ , ಎಲ್ಲಾ ವೇದಗಳನ್ನು, ಬ್ರಹ್ಮಸೂತ್ರದಿಂದಲೂ ಕೂಡಿ ಪಾಠಮಾಡುತ್ತಾ, ಅತ್ಯಂತ
ಸುಖದಿಂದ ಕಾಲವನ್ನು ಕಳೆದನು.
ರಾಮೋsಪಿ ಸಾರ್ದ್ಧಂಪವಮಾನಾತ್ಮಜೇನ ಸ
ಸೀತಯಾ ಲಕ್ಷ್ಮಣಪೂರ್ವಕೈಶ್ಚ ।
ತಥಾ ಗರುತ್ಮತ್ ಪ್ರಮುಖೈಶ್ಚ
ಪಾರ್ಷದೈಃ ಸಂಸೇವ್ಯಮಾನೋ ನ್ಯವಸತ್ ಪಯೋಬ್ಧೌ ॥೯.೧೨೩॥
ರಾಮಚಂದ್ರನೂ ಕೂಡಾ ಹನುಮಂತನಿಂದ, ಸೀತೆಯಿಂದ, ಲಕ್ಷ್ಮಣ
ಮೊದಲಾದವರಿಂದಲೂ ಕೂಡಿಕೊಂಡು, ಗರುಡ ಮೊದಲಾದವರಿಂದಲೂ, ಜಯ-ವಿಜಯ ಮೊದಲಾದ ಪರಿಚಾರಕರಿಂದಲೂ
ಸೇವಿಸಲ್ಪಡುವವನಾಗಿ ಕ್ಷೀರಸಾಗರದಲ್ಲಿ ವಾಸಮಾಡಿದನು.
ಕದಾಚಿದೀಶಃ ಸಕಲಾವತಾರಾನೇಕಂ
ವಿಧಾಯಾಹಿಪತೌ ಚ ಶೇತೇ ।
ಪೃಥಕ್ ಚ ಸಂವ್ಯೂಹ್ಯ ಕದಾಚಿದಿಚ್ಛಯಾ
ರೇಮೇ ರಮೇಶೋsಮಿತಸದ್ಗುಣಾರ್ಣ್ಣವಃ ॥೯.೧೨೪॥
ಒಮ್ಮೆ ನಾರಾಯಣನು ಎಲ್ಲಾ ಅವತಾರಗಳನ್ನು ಒಂದನ್ನಾಗಿ ಮಾಡಿಕೊಂಡು ಶೇಷನ
ಮೇಲೆ ಮಲಗುತ್ತಾನೆ. ಇನ್ನ್ಯಾವಗಲೋ ತನ್ನ ರೂಪಗಳನ್ನು ಬೇರೆಬೇರೆಯಾಗಿ ವಿಭಾಗಿಸಿಕೊಂಡು ಎಣೆಯಿರದ
ಗುಣಗಳಿಗೆ ಕಡಲಿನಂತೆ ಇರುವ ರಮೇಶನು ಕ್ರೀಡಿಸುತ್ತಾನೆ.
No comments:
Post a Comment