ಇತ್ಯಶೇಷಪುರಾಣೇಭ್ಯಃ
ಪಞ್ಚರಾತ್ರೇಭ್ಯ ಏವ ಚ ।
ಭಾರತಾಚ್ಚೈವ ವೇದೇಭ್ಯೋ
ಮಹಾರಾಮಾಯಣಾದಪಿ ॥೯.೧೨೫॥
ಪರಸ್ಪರವಿರೋಧಸ್ಯ ಹಾನಾನ್ನಿರ್ಣ್ಣೀಯ
ತತ್ತ್ವತಃ ।
ಯುಕ್ತ್ಯಾ ಬುದ್ಧಿಬಲಾಚ್ಚೈವ
ವಿಷ್ಣೋರೇವ ಪ್ರಸಾದತಃ ॥೯.೧೨೬॥
ಬಹುಕಲ್ಪಾನುಸಾರೇಣ ಮಯೇಯಂ
ಸತ್ಕಥೋದಿತಾ ।
ನೈಕಗ್ರನ್ಥಾಶ್ರಯಾತ್ ತಸ್ಮಾನ್ನಾSಶಙ್ಕ್ಯಾSತ್ರ ವಿರುದ್ಧತಾ ॥೯.೧೨೭॥
(ಆಚಾರ್ಯರು ಈವರೆಗೆ ತಾನು ಪ್ರಸ್ತುತಪಡಿಸಿದ ರಾಮಾಯಣದ ನಿರ್ಣಯಕ್ಕೆ ಪ್ರಮಾಣ ಯಾವುದು ಎನ್ನುವುದನ್ನು ಇಲ್ಲಿ ಹೇಳಿದ್ದಾರೆ) ಈರೀತಿಯಾಗಿ, ಎಲ್ಲಾ ಪುರಾಣಗಳಿಂದಲೂ, ಪಂಚರಾತ್ರಗಳಿಂದಲೂ , ಭಾರತದಿಂದಲೂ ,
ವೇದದಿಂದಲೂ, ಮೂಲ ರಾಮಾಯಣದಿಂದಲೂ, ಅಲ್ಲಿ ಸೇರಿದ್ದ ಕಸವನ್ನು ತೆಗೆದು, ಪರಸ್ಪರ ವಿರೋಧವನ್ನು ಕಳೆದು, ನಿರ್ಣಯವನ್ನು ಮಾಡಿ,
ಯುಕ್ತಿಯಿಂದ, ಪ್ರಜ್ಞೆಯ ಬಲದಿಂದ, ಪರಮಾತ್ಮನ
ಅನುಗ್ರಹದಿಂದ, ಬಹಳ ಕಲ್ಪಕ್ಕೆ ಅನುಗುಣವಾಗಿ ಈ ರಾಮಾಯಣದ ಕಥೆಯನ್ನು ಹೇಳಿದ್ದೇನೆ. ಯಾವುದೋ ಒಂದು
ಗ್ರಂಥವನ್ನು ನಾನು ಆಶ್ರಯಿಸಿಲ್ಲ. ಹಲವಾರು ಗ್ರಂಥಗಳನ್ನು ಆಶ್ರಯಿಸಿದ್ದೇನೆ. ಅದರಿಂದಾಗಿ
ಇದರಲ್ಲಿ ವಿರೋಧವನ್ನು ಎಣಿಸಬಾರದು.
ಕ್ವಚಿನ್ಮೋಹಾಯಾಸುರಾಣಾಂ ವ್ಯತ್ಯಾಸಃ
ಪ್ರತಿಲೋಮತಾ ।
ಉಕ್ತಾ ಗ್ರನ್ಥೇಷು ತಸ್ಮಾದ್ಧಿ ನಿರ್ಣ್ಣಯೋSಯಂ
ಕೃತೋ ಮಯಾ ॥೯.೧೨೮॥
ಕೆಲವೊಮ್ಮೆ ಅಸುರರ ಮೋಹಕ್ಕಾಗಿ ನಾನಾ ರೀತಿಯ ವ್ಯತ್ಯಾಸ ಮತ್ತು ಪ್ರತಿಲೋಮತ್ವವು
ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ. ಆ ಕಾರಣದಿಂದ ಗ್ರಂಥೋಕ್ತವಾದ ಈ ನಿರ್ಣಯವನ್ನು ನಾನು
ಮಾಡಿದ್ದೇನೆ.
ಏವಂ ಚ ವಕ್ಷ್ಯಮಾಣೇಷು ನೈವಾsಶಙ್ಕ್ಯಾ ವಿರುದ್ಧತಾ ।
ಸರ್ವಕಲ್ಪಸಮಶ್ಚಾಯಂ ಪಾರಾವರ್ಯ್ಯಕ್ರಮಃ
ಸದಾ ॥೯.೧೨೯॥
ಈರೀತಿಯಾಗಿ ಕಥೆಗಳು
ಹೇಳಲ್ಪಡುತ್ತಿರಲು, ಇಲ್ಲಿ ವಿರೋಧವನ್ನು ಶಂಕಿಸಬಾರದು. ಇದರ ಪೂರ್ವಾಪರಿ ಭಾವ ಎಲ್ಲಾ
ಕಲ್ಪದಲ್ಲಿಯೂ ಸಾಧಾರಣ ಅಥವಾ ಸಮವಾಗಿರುತ್ತದೆ. [ಇಲ್ಲಿ ಹೇಳಿದ ಕ್ರವವನ್ನು ಮುಖ್ಯವಾಗಿ
ಅನುಸರಿಸಿರತಕ್ಕದ್ದಾಗಿರುತ್ತದೆ. ಅಂದರೆ ಮುಖ್ಯವಾಗಿ ಪ್ರತಿ ಕಲ್ಪದಲ್ಲಿಯೂ ಇದೇ ಕ್ರಮದಲ್ಲಿ
ಘಟನೆಗಳು ಸಂಭವಿಸುತ್ತವೆ]
No comments:
Post a Comment