ಇತೀರಿತೋ ಮರುತ್ಸುತೋ ಜಗಾದ
ವಿಶ್ವನಾಯಕಮ್ ।
ವಿಧೇಹಿ ಪಾದಪಙ್ಕಜೇ ತವೇಶ
ಭಕ್ತಿಮುತ್ತಮಾಮ್ ॥೯.೬೯॥
ಈರೀತಿಯಾದ ರಾಮಚಂದ್ರನ ನುಡಿಯನ್ನು ಕೇಳಿದ ಹನುಮಂತನು ರಾಮಚಂದ್ರನಲ್ಲಿ
“ನಿನ್ನ ಉತ್ಕೃಷ್ಟವಾದ ಭಕ್ತಿಯನ್ನು ನನಗೆ ಯಾವಾಗಲೂ ಕೊಡುತ್ತಿರು. ಇಷ್ಟೇ ನನ್ನ ಪ್ರಾರ್ಥನೆ” ಎನ್ನುತ್ತಾನೆ.
ಸದಾ ಪ್ರವರ್ದ್ಧಮಾನಯಾ ತಯಾ ರಮೇsಹಮಞ್ಜಸಾ ।
ಸಮಸ್ತಜೀವಸಞ್ಚಯಾತ್ ಸದಾsಧಿಕಾ ಹಿ ಮೇsಸ್ತು ಸಾ ॥೯.೭೦॥
ಸದಾ ಬೆಳೆಯುತ್ತಲೇ ಇರುವ ನಿನ್ನ ಮೇಲಿನ ಭಕ್ತಿಯಿಂದ ನಾನು ಕ್ರೀಡಿಸುತ್ತೇನೆ.
ಜೀವರಲ್ಲಿಯೇ ಅತ್ಯಂತ ಹೆಚ್ಚು ಭಕ್ತಿಯನ್ನು ನನಗೆ
ಅನುಗ್ರಹಿಸು. ಅದು ಎಂದೂ ಕೂಡಾ ನನ್ನಲ್ಲಿ
ಅಧಿಕವಾಗಿರಲಿ.
ನಮೋನಮೋ ನಮೋನಮೋ ನತೋsಸ್ಮಿತೇ ಸದಾ ಪದಮ್ ।
ಸಮಸ್ತಸದ್ಗುಣೋಚ್ಛ್ರಿತಂ ನಮಾಮಿ ತೇ
ಪದಂ ಪುನಃ ॥೯.೭೧॥
ನಮಸ್ಕಾರ, ನಮಸ್ಕಾರ, ನಮಸ್ಕಾರ , ನಮಸ್ಕಾರ. ನಿನ್ನ ಪಾದವನ್ನು ಈಗಲೂ,
ಯಾವಾಗಲೂ ನಮಿಸುತ್ತಿರುತ್ತೇನೆ. ಸಮಸ್ತ ಸದ್ಗುಣಗಳಿಂದ
ಕೂಡಿರುವ ನಿನ್ನ ಸ್ವರೂಪವನ್ನು ಮತ್ತೆ ಮತ್ತೆ ನಮಸ್ಕರಿಸುತ್ತಿರುತ್ತೇನೆ.
ಇತೀರಿತೇ ತಥೇತಿ ತಂ ಜಗಾದ ಪುಷ್ಕರೇಕ್ಷಣಃ
।
ಜಗಾಮ ಧಾಮ ಚಾsತ್ಮನಸ್ತೃಣಾದಿನಾ ಸಹೈವ ಸಃ ॥೯.೭೨॥
ಈರೀತಿಯಾಗಿ ಹೇಳುತ್ತಿರಲು, ಪುಂಡರೀಕಾಕ್ಷನಾದ ನಾರಾಯಣನು ‘ನೀನು ಬೇಡಿದಂತೆಯೇ
ಆಗಲಿ’ ಎಂದು ಅನುಗ್ರಹಿಸುತ್ತಾನೆ ಮತ್ತು ಮುಕ್ತಿಯನ್ನು ಹೊಂದಲು ಬಂದಿರುವ ಹುಲ್ಲಿನಂತಹ ತೃಣ ಜೀವಗಳೂ
ಸೇರಿದಂತೆ ಇತರ ಜೀವರೊಂದಿಗೆ ತನ್ನ ಲೋಕಕ್ಕೆ ತೆರಳುವಂತವನಾಗುತ್ತಾನೆ.
ಖಗಾ ಮೃಗಸ್ತೃಣಾದಯಃ ಪಿಪೀಲಿಕಾಶ್ಚ ಗರ್ದ್ದಭಾಃ
।
ತದಾssಸುರುತ್ತಮಾ ಯತೋ ನೃವಾನರಾಸ್ತು ಕಿಂಪುನಃ
॥೯.೭೩॥
ಪಕ್ಷಿಗಳು, ಜಿಂಕೆ ಮತ್ತಿತರ ಮೃಗಗಳು, ಹುಲ್ಲು, ಇರುವೆ ಮೊದಲಾದವುಗಳೂ ಕೂಡಾ ರಾಮನ ಕಾಲದಲ್ಲಿ
ಉತ್ಕೃಷ್ಟವಾಗಿದ್ದವು. ಇನ್ನು ಮನುಷ್ಯರು ಮತ್ತು ವಾನರರು ಉತ್ಕೃಷ್ಟರಾಗಿದ್ದರು ಎಂದು ಏನು
ಹೇಳಬೇಕು.
ಸದೈವ ರಾಮಭಾವನಾಃ ಸದಾ ಸುತತ್ತ್ವವೇದಿನಃ
।
ಯತೋsಭವಂಸ್ತತಸ್ತು ತೇ ಯಯುಃ ಪದಂ
ಹರೇಸ್ತದಾ ॥೯.೭೪
॥
ಅಲ್ಲಿಯ ಪ್ರಜೆಗಳು ಯಾವಾಗಲೂ ರಾಮನಲ್ಲಿ ಭಕ್ತಿ ಇಟ್ಟಿದ್ದರು. ಒಳ್ಳೆಯ ತತ್ವವನ್ನು ಬಲ್ಲವರಾಗಿದ್ದರು. ಅದರಿಂದಾಗಿ ಅವರಿಗೆ
ನಾರಾಯಣನ ಪಾದವನ್ನು ಸೇರುವಂತಹ ಭಾಗ್ಯ ದೊರೆಯಿತು.
ಕನ್ನಡ ಪದ್ಯರೂಪ: https://go-kula.blogspot.com/2018/08/9-69-74.html
ಕನ್ನಡ ಪದ್ಯರೂಪ: https://go-kula.blogspot.com/2018/08/9-69-74.html
No comments:
Post a Comment