ಪ್ರವಿಶ್ಯ ಭೂಮೌ ಸಾ ದೇವೀ
ಲೋಕದೃಷ್ಟ್ಯನುಸಾರತಃ ।
ರೇಮೇ ರಾಮೇಣಾವಿಯುಕ್ತಾ ಭಾಸ್ಕರೇಣ
ಪ್ರಭಾ ಯಥಾ ॥೯.೪೦॥
ಆ ಸೀತಾದೇವಿಯು ಲೋಕದದೃಷ್ಟಿಗೆ
ಅನುಸಾರವಾಗಿ ಭೂಮಿಯನ್ನು ಪ್ರವೇಶಿಸಿ, ಸೂರ್ಯನಿಂದ ವೀಯೋಗವಿಲ್ಲದ ಸೂರ್ಯಕಾಂತಿಯಂತೆ , ಶ್ರೀರಾಮನಿಂದ
ಬೇರ್ಪಡದೇ ಶೋಭಿಸಿದಳು.
ಏವಂ ರಮಲಾಳಿತಪಾದಪಲ್ಲವಃ ಪುನಃ ಸ
ಯಜ್ಞೈಶ್ಚ ಯಜನ್ ಸ್ವಮೇವ ।
ವರಾಶ್ವಮೇಧಾದಿಭಿರಾಪ್ತಕಾಮೋ ರೇಮೇsಭಿರಾಮೋ ನೃಪತೀನ್ ವಿಶಿಕ್ಷಯನ್ ॥೯.೪೧॥
ಈ ರೀತಿಯಾಗಿ ಲಕ್ಷ್ಮೀ ದೇವಿಯಿಂದ ವನ್ದಿತವಾದ ಪಾದಕಮಲವುಳ್ಳ ಶ್ರೀರಾಮಚಂದ್ರನು, ಅಶ್ವಮೇಧ ಮೊದಲಾದ ಯಜ್ಞಗಳಿಂದ ತನ್ನನ್ನೇ ತಾನು ಪೂಜಿಸುತ್ತಾ,
ಆಪ್ತಕಾಮನೆನಿಸಿ, ರಾಜರಿಗೆ ತಾವು ಹೇಗಿರಬೇಕು ಎನ್ನುವುದನ್ನುಶಿಕ್ಷಿಸುತ್ತಾ, ವಿಹರಿಸಿದನು.
ರಾಮಸ್ಯ ದೃಶ್ಯಾ ತ್ವನ್ಯೇಷಾಮದೃಶ್ಯಾ
ಜನಕಾತ್ಮಜಾ ।
ಭೂಮಿಪ್ರವೇಶಾದೂರ್ಧ್ವಂ ಸಾ ರೇಮೇ
ಸಪ್ತಶತಂ ಸಮಾಃ ॥೯.೪೨॥
ರಾಮನಿಗೆ ಕಾಣುವವಳಾಗಿಯೂ,
ಬೇರೊಬ್ಬರಿಗೆ ಅಗೋಚರಳಾಗಿ ಸೀತೆ, ‘ಭೂಮಿ
ಪ್ರವೇಶ’ ಘಟನೆಯ ನಂತರ ಏಳುನೂರು ವರ್ಷಗಳ ಕಾಲ
ಕ್ರೀಡಿಸಿದಳು.
ಏವಂವಿಧಾನ್ಯಗಣಿತಾನಿ ಜನಾರ್ದ್ದನಸ್ಯ
ರಾಮಾವತಾರಚರಿತಾನಿ ತದನ್ಯಪುಮ್ಭಿಃ ।
ಶಕ್ಯಾನಿ ನೈವ ಮನಸಾsಪಿ ಹಿ ತಾನಿ ಕರ್ತ್ತುಂ ಬ್ರಹ್ಮೇಶಶೇಷಪುರುಹೂತಮುಖೈಃ ಸುರೈಶ್ಚ ॥೯.೪೩ ॥
ಈರೀತಿಯಾಗಿರುವ ರಾಮಾವತಾರದ ಚರಿತ್ರೆಗಳನ್ನು ನಾರಾಯಣನನ್ನು ಬಿಟ್ಟು
ಬೇರೊಬ್ಬರಿಗೆ ಮನಸ್ಸಿನಿಂದಲೂ ಮಾಡಲು ಅಸಾಧ್ಯ. ಅದು ಬ್ರಹ್ಮ, ರುದ್ರ, ಶೇಷ, ಇಂದ್ರ, ಮೊದಲಾದ ಯಾರಿಂದಲೂ
ಸಾಧ್ಯವಿಲ್ಲಾ.
ಕನ್ನಡ ಪದ್ಯರೂಪ: https://go-kula.blogspot.com/2018/08/9-40-43.html
ಕನ್ನಡ ಪದ್ಯರೂಪ: https://go-kula.blogspot.com/2018/08/9-40-43.html
No comments:
Post a Comment