ಅಥಕೇಚಿದಾಸುರಸುರಾಃ ಸುರಾಣಕಾ
ಇತ್ಯುರುಪ್ರಥಿತಪೌರುಷಾಃ ಪುರಾ ।
ತೇ ತಪಃ ಸುಮಹದಾಸ್ಥಿತಾ ವಿಭುಂ
ಪದ್ಮಸಮ್ಭವಮವೇಕ್ಷ್ಯ ಚೋಚಿರೇ ॥೯.೨೭॥
ಇಲ್ಲಿ ವಿಷಯಾಂತರದಲ್ಲಿ(ಕಥಾಂತರವನ್ನು) ಹೇಳುತ್ತಾರೆ: ಸುರಾಣಕರು ಎಂದು ಎಲ್ಲೆಡೆ ಪ್ರಸಿದ್ಧವಾದ,
ಪರಾಕ್ರಮವುಳ್ಳ ಕೆಲವರು ಅಸುರರಿದ್ದರು. ಅವರು ಬಹಳ ದೊಡ್ಡ ತಪಸ್ಸನ್ನು ಮಾಡಿದವರಾಗಿ,
ತಪಸ್ಸಿಗೊಲಿದ ಬ್ರಹ್ಮದೇವರಲ್ಲಿ ಹೀಗೆ ಹೇಳಿದರು:
ಭೂರಿಪಾಕಕೃತಿನೋsಪಿ ನಿಶ್ಚಯಾನ್ಮುಕ್ತಿಮಾಪ್ನುಮ
ಉದಾರಸದ್ಗುಣ ।
ಇತ್ಯುದೀರಿತಮಜೋsವಧಾರ್ಯ್ಯ ತತ್ ಪ್ರಾಹ ಚ
ಪ್ರಹಸಿತಾನನಃ ಪ್ರಭುಃ ॥೯.೨೮॥
‘ಉತ್ಕೃಷ್ಟವಾದ
ಸದ್ಗುಣವುಳ್ಳವನೇ, ನಾವು ಅತ್ಯಂತ ಪಾಪವನ್ನು ಮಾಡುತ್ತಿದ್ದರೂ ಕೂಡಾ, ಖಂಡಿತವಾಗಿ
ಮುಕ್ತಿಯನ್ನು ಹೊಂದಬೇಕು’. ಈ ರೀತಿಯಾದ ಸುರಾಣಕರ ಮಾತನ್ನು ಬ್ರಹ್ಮದೇವರು ಕೇಳಿ, ಮುಗುಳುನಕ್ಕು ಹೀಗೆ ನುಡಿದರು:
ಯಾವದೇವ ರಮಯಾ ರಮೇಶ್ವರಂ ನೋ
ವಿಯೋಜಯಥ ಸದ್ಗುಣಾರ್ಣ್ಣವಮ್ ।
ತಾವದುಚ್ಚಮಪಿ ದುಷ್ಕೃತಂ ಭವನ್ಮೋಕ್ಷಮಾರ್ಗ್ಗಪರಿಪನ್ಥಿ
ನೋ ಭವೇತ್ ॥೯.೨೯॥
‘ಎಲ್ಲಿಯ ತನಕ ರಮೆಯಿಂದ ರಮೇಶ್ವರನನ್ನು ಬೇರ್ಪಡಿಸುವುದಿಲ್ಲವೋ,
ಅಲ್ಲಿಯ ತನಕ ನಿಮ್ಮ ಯಾವುದೇ ತಪ್ಪುಗಳು ಮೋಕ್ಷದ ಮಾರ್ಗದಲ್ಲಿ ಅಡ್ಡಿ ಆಗಲಾರದು’
ಇತ್ಯುದೀರಿತಮವೇತ್ಯ ತೇSಸುರಾಃ ಕ್ಷಿಪ್ರಮೋಕ್ಷಗಮನೋತ್ಸುಕಾಃ
ಕ್ಷಿತೌ ।
ಸಾಧನೋಪಚಯಕಾಙ್ಕ್ಷಿಣೋ ಹರೌ ಶಾಸತಿ
ಕ್ಷಿತಿಮಶೇಷತೋSಭವನ್ ॥೯.೩೦॥
ಈ ರೀತಿಯಾಗಿ ಬ್ರಹ್ಮನಿಂದ ವರವನ್ನು ಪಡೆದ ಅಸುರರು,
ಕ್ಷಿಪ್ರವಾಗಿ ಮೋಕ್ಷವನ್ನು ಹೊಂದಲು ಬಯಸಿ, ತಮ್ಮ
ಸಾಧನೆಯನ್ನು ಮಾಡಬೇಕು ಎಂದು, ರಾಮಚಂದ್ರ ಆಳುತ್ತಿರಲು, ಎಲ್ಲರೂ ಆ ಭೂಮಿಯಲ್ಲಿ ಎಲ್ಲೆಡೆ ಹುಟ್ಟಿದರು.
ತಾನನಾದಿಕೃತದೋಷಸಞ್ಚಯೈರ್ಮ್ಮೋಕ್ಷಮಾರ್ಗ್ಗಗತಿಯೋಗ್ಯತೋಜ್ಝಿತಾನ್
।
ಮೈಥಿಲಸ್ಯ ತನಯಾ ವ್ಯಚಾಲಯನ್ಮಾಯಯಾ ಸ್ವತನುವಾ ಸ್ವಮಾರ್ಗ್ಗತಃ ॥೯.೩೧॥
ಅನಾದಿಕಾಲದಿಂದ ಮಾಡಿದ ಪಾಪದ ಸಮೂಹಗಳಿಂದ ಮೋಕ್ಷಕ್ಕೆ ಹೋಗಲು ಯೋಗ್ಯತೆ
ಇಲ್ಲದ ಈ ಸುರಾಣಕರನ್ನು ಸೀತಾದೇವಿಯೇ ತನ್ನದುರ್ಗಾರೂಪದ ಮಾಯೆಯಿಂದ, ಆ ಮಾರ್ಗದಿಂದ ಕದಲಿಸಿದಳು.
ಆಜ್ಞಯೈವ ಹಿ ಹರೇಸ್ತು ಮಾಯಯಾ
ಮೋಹಿತಾಸ್ತು ದಿತಿಜಾ ವ್ಯನಿನ್ದಯನ್ ।
ರಾಘವಂ ನಿಶಿಚರಾಹೃತಾಂ ಪುನರ್ಜ್ಜಾನಕೀಂ
ಜಗೃಹ ಇತ್ಯನೇಕಶಃ ॥೯.೩೨॥
ನಾರಾಯಣನ ಅಣತಿಯಿಂದಲೇ, ದುರ್ಗಾದೇವಿಯಿಂದ ತಪ್ಪು ತಿಳಿದುಕೊಂಡ ದೈತ್ಯರು,
ರಾಮಚಂದ್ರನನ್ನು ನಿಂದನೆ ಮಾಡಲಾರಂಭಿಸಿದರು. ‘ರಾವಣ ಹೊತ್ತೊಯ್ದ ಜಾನಕಿಯನ್ನು ರಾಮ ಮತ್ತೆ
ಸ್ವೀಕರಿಸಿದ’ ಎಂಬಿತ್ತ್ಯಾದಿ ಮಾತುಗಳಿಂದ ಬಹುಪ್ರಕಾರವಾಗಿ ನಿಂದಿಸಲಾರಮ್ಭಿಸಿದರು.
[ರಾಮಾಯಣದ ಉತ್ತರಕಾಂಡದಲ್ಲಿ(೪೩.೨೦) ಹೇಳುವಂತೆ: ‘ಏವಂ ಬಹುವಿಧಾ
ವಾಚೋ ವದಂತಿ ಪುರವಾಸಿನಃ । ನಗರೇಷು ಚ ಸರ್ವೇಷು ರಾಜನ್ ಜನಪದೇಷು
ಚ’ ಬಹಳ ಜನರು ಅಲ್ಲಲ್ಲಿ ನಿಂತು ಮಾತನಾಡುತ್ತಿದ್ದುದನ್ನು ರಾಮ
ಗೂಢಚಾರರ ಮುಖೇನ, ಮತ್ತು ಸ್ವಯಂ ತಾನೇ ಮಾರುವೇಷದಲ್ಲಿ
ಹೋಗಿ ಕೇಳಿಸಿಕೊಂಡ].
ಬ್ರಹ್ಮವಾಕ್ಯಮೃತಮೇವ ಕಾರಯನ್
ಪಾತಯಂಸ್ತಮಸಿ ಚಾನ್ಧ ಆಸುರಾನ್ ।
ನಿತ್ಯಮೇವ ಸಹಿತೋsಪಿ ಸೀತಯಾ ಸೋsಜ್ಞಸಾಕ್ಷಿಕಮಭೂದ್ ವಿಯುಕ್ತವತ್ ॥೯.೩೩॥
ಬ್ರಹ್ಮ ಸುರಾಣಕರಿಗೆ ಕೊಟ್ಟ ವರವನ್ನು ಸತ್ಯವನ್ನಾಗಿ ಮಾಡಲು, ಸುರಾಣಕ
ದೈತ್ಯರನ್ನು ಅನ್ಧತಮಸ್ಸಿನಲ್ಲಿ ಹಾಕಲು, ಸದಾ ಲಕ್ಷ್ಮೀದೇವಿಯಿಂದ ಸಹಿತನಾದರೂ ಕೂಡಾ, ಅಜ್ಞಾನಿಗಳ ಕಣ್ಣಿಗೆ ಸೀತೆಯನ್ನು ತೊರೆದ ವಿಯೋಗಿಯಂತೆ
ಶ್ರೀರಾಮ ಕಂಡ.
ಕನ್ನಡ ಪದ್ಯರೂಪ: https://go-kula.blogspot.com/2018/08/9-27-33.html
ಕನ್ನಡ ಪದ್ಯರೂಪ: https://go-kula.blogspot.com/2018/08/9-27-33.html
🙏🏼🙏🏼🙏🏼🙏🏼🙏🏼
ReplyDelete