ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 1, 2018

Mahabharata Tatparya Nirnaya Kannada 9.06-9.11


ಸರ್ವೇsಜರಾ ನಿತ್ಯಬಲೋಪಪನ್ನಾಯಥೇಷ್ಟಸಿದ್ಧ್ಯಾ ಚ ಸದೋಪಪನ್ನಾಃ
ಸಮಸ್ತದೋಷೈಶ್ಚ ಸದಾ ವಿಹೀನಾಃ ಸರ್ವೇ ಸುರೂಪಾಶ್ಚ ಸದಾ ಮಹೋತ್ಸವಾಃ ೯.೦೬

ಎಲ್ಲರೂ ಕೂಡಾ ಮುದಿತನ ಇಲ್ಲದವರಾಗಿ ಯಾವಾಗಲೂ ಕೂಡಾ ಬಲಿಷ್ಠರಾಗಿರುವವರಾಗಿದ್ದರು. ಬಯಸಿದ್ದನ್ನು ಪಡೆಯುತ್ತಿದ್ದುದರಿಂದ ರಾಗ-ದ್ವೇಷಾದಿಗಳಿಗೆ, ವಿಪರೀತ ಕ್ರೋಧಾದಿಗಳಿಗೆ ಯಾರೂ ಒಳಗಾಗುತ್ತಿರಲಿಲ್ಲ.  ಅದರಿಂದಾಗಿ ಯಾವ ದೋಷಗಳಿಗೂ ಅವರು ಒಳಗಾಗಿರಲಿಲ್ಲ. ಎಲ್ಲರೂ ಒಳ್ಳೆಯ ರೂಪವನ್ನು ಹೊಂದಿದವರಾಗಿ ಸದಾ  ಹುಮ್ಮಸ್ಸಿನಿಂದ ಇರುತ್ತಿದ್ದರು.

ಸರ್ವೇ ಮನೋವಾಕ್ತನುಭಿಃ ಸದೈವ ವಿಷ್ಣುಂ ಯಜನ್ತೇ ನತು ಕಞ್ಚಿದನ್ಯಮ್
ಸಮಸ್ತರತ್ನೋದ್ಭರಿತಾ ಚ ಪೃಥ್ವೀ ಯಥೇಷ್ಟಧಾನ್ಯಾ ಬಹುದುಗ್ಧಗೋಮತೀ ೯.೦೭

ಎಲ್ಲರೂ ಕೂಡಾ ಮನಸ್ಸು, ಮಾತು, ದೇಹಗಳಿಂದ ನಾರಾಯಣನನ್ನು ಹೊಮಿಸುತ್ತಿದ್ದರು, ಪೂಜಿಸುತ್ತಿದ್ದರು. ಭೂಮಿಯು ಯಥೇಷ್ಟ ಧಾನ್ಯವುಳ್ಳದ್ದಾಗಿತ್ತು. ಚನ್ನಾಗಿ ಹಾಲು ಕರೆಯುವ ಹಸುಗಳಿದ್ದವು. ಎಲ್ಲಾ ರತ್ನಗಳಿಂದ ಭೂಮಿ ಸಮೃದ್ಧವಾಗಿತ್ತು.

ಸಮಸ್ತಗನ್ಧಾಶ್ಚ ಸದಾsತಿಹೃದ್ಯಾ ರಸಾ ಮನೋಹಾರಿಣ ಏವ ತತ್ರ
ಶಬ್ದಾಶ್ಚ ಸರ್ವೇ ಶ್ರವಣಾತಿಹಾರಿಣಃ ಸ್ಪರ್ಶಾಶ್ಚ ಸರ್ವೇ ಸ್ಪರ್ಶೇನ್ದ್ರಿಯಪ್ರಿಯಾಃ ೯.೦೮

ಎಲ್ಲಾ ಗಂಧಗಳೂ ಕೂಡಾ ಮನೋಹರವಾಗಿದ್ದವು (ಆ ರಾಮರಾಜ್ಯದಲ್ಲಿ ದುರ್ಗಂಧ ಎನ್ನುವುದು ಇರಲಿಲ್ಲಾ). ಎಲ್ಲಾ ರಸಗಳೂ ಕೂಡಾ(ಷಡ್ರಸಗಳು) ಮನಸ್ಸನ್ನು ಸಂತಸಗೊಳಿಸುತ್ತಿದ್ದವು. ಶಬ್ದ ಎನ್ನುವುದು ಕಿವಿಗೆ ಹಿತವಾಗಿರುತ್ತಿತ್ತು. ಹಾಗೇ ಎಲ್ಲದರ ಸ್ಪರ್ಶವೂ ಕೂಡಾ ಸ್ಪರ್ಶೇನ್ದ್ರಿಯಗಳಿಗೆ ಪ್ರಿಯವಾಗಿತ್ತು.

ನ ಕಸ್ಯಚಿದ್ ದುಃಖಮಭೂತ್ ಕಥಞ್ಚಿನ್ನ ವಿತ್ತಹೀನಶ್ಚ ಬಭೂವ ಕಶ್ಚನ
ನಾಧರ್ಮ್ಮಶೀಲೋ ನಚ ಕಶ್ಚನಾಪ್ರಜೋ ನ ದುಷ್ಪ್ರಜೋ ನೈವ ಕುಭಾರ್ಯ್ಯಕಶ್ಚ ೯.೦೯

ಯಾರಿಗೂ ಕೂಡಾ ದುಃಖ ಇರಲಿಲ್ಲಾ. ಯಾವುದೇ ರೀತಿಯಿಂದಲೂ  ಯಾರೂ ವಿತ್ತಹೀನರಾಗಲಿಲ್ಲಾ. ಅಧರ್ಮಶೀಲರು ಯಾರೂ ಇರಲಿಲ್ಲಾ. ಯಾರೂ ಸಂತತಿ ಇಲ್ಲದೇ ಇರುತ್ತಿರಲಿಲ್ಲಾ. ಕೆಟ್ಟ ಮಕ್ಕಳು ಇರಲಿಲ್ಲಾ. ಕೆಟ್ಟ ಹೆಂಡತಿಯೂ ಯಾರಿಗೂ ಇರಲಿಲ್ಲಾ.

ಸ್ತ್ರಿಯೋ ನಚಾsಸನ್ ವಿಧವಾಃ ಕಥಞ್ಚಿನ್ನವೈ ಪುಮಾಂಸೋ ವಿಧುರಾ ಬಭೂವುಃ
ನಾನಿಷ್ಟಯೋಗಶ್ಚ ಬಭೂವ ಕಸ್ಯಚಿನ್ನಚೇಷ್ಟಹಾನಿರ್ನ್ನಚ ಪೂರ್ವಮೃತ್ಯುಃ ೯.೧೦

ಹೆಣ್ಣುಮಕ್ಕಳು ವಿಧವೆಯರಾಗಲಿಲ್ಲಾ. ಗಂಡುಮಕ್ಕಳು ವಿಧುರರಾಗಲಿಲ್ಲಾ.(ಇದರರ್ಥ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಸಾಯುತ್ತಿದ್ದರು ಎಂದಲ್ಲ.  ಮಕ್ಕಳ ಜವಾಬ್ಧಾರಿ ತೀರುವ ಮೊದಲು, ವಾನಪ್ರಸ್ಥಾಶ್ರಮಕ್ಕೆ ಹೋಗುವ ಮೊದಲು ಪತಿ ಅಥವಾ ಪತ್ನಿ ವಿಯೋಗ ಯಾರಿಗೂ ಆಗುತ್ತಿರಲಿಲ್ಲ ಎಂದರ್ಥ) ಯಾರಿಗೂ ಕೂಡಾ ಅನಿಷ್ಟ ಸಂಬಂಧ ಆಗುತ್ತಿರಲಿಲ್ಲಾ. ಇಷ್ಟಹಾನಿ ಆಗಲಿಲ್ಲಾ. ಪೂರ್ವಮೃತ್ಯು(ಕಿರಿಯರು ಹಿರಿಯರು ಬದುಕಿರುವಾಗಲೇ ಸಾಯುವ ಪ್ರಸಂಗ) ಇರಲಿಲ್ಲಾ.

ಯಥೇಷ್ಟಮಾಲ್ಯಾಭರಣಾನುಲೇಪನಾ ಯಥೇಷ್ಟಪಾನಾಶನವಾಸಸೋsಖಿಲಾಃ
ಬಭೂವುರೀಶೇ ಜಗತಾಂ ಪ್ರಶಾಸತಿ ಪ್ರಕೃಷ್ಟಧರ್ಮ್ಮೇಣ ಜನಾರ್ದ್ದನೇ ನೃಪೇ ೯.೧೧

ರಾಮಚಂದ್ರನು ರಾಜನಾಗಿ ಒಳ್ಳೆಯ ಧರ್ಮದಿಂದ ಆಳುತ್ತಿರಲು, ಇಷ್ಟವಾಗಿರುವ ಮಾಲೆ, ಇಷ್ಟವಾಗಿರುವ ಆಭರಣ, ಇಷ್ಟವಾಗಿರತಕ್ಕಂತಹ ಗಂಧ, ಮನಸ್ಸಿಗೆ ಹಿತವಾಗುವಂತಹ ಕುಡಿಯುವಿಕೆ, ಊಟ, ಬಟ್ಟೆ, ಈ ರೀತಿ ಎಲ್ಲವೂ ಸಮೃದ್ಧಿಯಾಗಿ ಪ್ರಜೆಗಳಿಗೆ ದೊರೆಯುತ್ತಿತ್ತು.

ಕನ್ನಡ ಪದ್ಯರೂಪ: https://go-kula.blogspot.com/2018/08/9-06-11.html

No comments:

Post a Comment