ಸುಪ್ತಘ್ನೋ ಯಜ್ಞಕೋಪಶ್ಚ ಶಕುನಿರ್ದ್ದೆವತಾಪನಃ
।
ವಿದ್ಯುಜ್ಜಿಹ್ವಃ̐ ಪ್ರಮಾಥೀ
ಚ ಶುಕಸಾರಣಸಂಯುತಾಃ ॥೮.೩೫॥
ರಾವಣಪ್ರೇರಿತಾಃ ಸರ್ವಾನ್ ಮಥನ್ತಃ
ಕಪಿಕುಞ್ಜರಾನ್ ।
ಅವದ್ಧ್ಯಾ ಬ್ರಹ್ಮವರತೋ ನಿಹತಾ ರಾಮಸಾಯಕೈಃ ॥೮.೩೬॥
ಬ್ರಹ್ಮವರದಿಂದ ಅವದ್ಯರಾದ ಸುಪ್ತಘ್ನ, ಯಜ್ಞಕೋಪ, ಶಕುನಿ, ದೇವತಾಪನಃ, ವಿದ್ಯುಜ್ಜಿಹ್ವ̐, ಪ್ರಮಾಥೀ,
ಶುಕ, ಸಾರಣ ಎಂಬ ಎಂಟು ಜನ ರಾಕ್ಷಸರು, ರಾವಣನಿಂದ ಪ್ರೇರಿತರಾಗಿ, ಕಪಿಗಳನ್ನು ನಾಶಮಾಡುತ್ತಿರಲು,
ರಾಮನ ಬಾಣಗಳಿಂದ ಸತ್ತರು.
ಯುದ್ಧೋನ್ಮತ್ತಶ್ಚ ಮತ್ತಶ್ಚ ದೇವಾನ್ತಕನರಾನ್ತಕೌ
।
ತ್ರಿಶಿರಾ ಅತಿಕಾಯಶ್ಚ ನಿರ್ಯ್ಯಯೂ
ರಾವಣಾಜ್ಞಯಾ ॥೮.೩೭॥
ಯುದ್ಧೋನ್ಮತ್ತ, ಮತ್ತ, ದೇವಾನ್ತಕ, ನರಾನ್ತಕ, ತ್ರಿಶಿರಾ, ಅತಿಕಾಯ
ಎನ್ನುವ ಆರು ಜನ ಮತ್ತೆ ರಾವಣನ ಆಜ್ಞೆಯಂತೆ ಯುದ್ಧಕ್ಕೆಂದು ಬಂದರು.
ನರಾನ್ತಕೋ ರಾವಣಜೋ ಹಯವರ್ಯ್ಯೋಪರಿ
ಸ್ಥಿತಃ ।
ಅಭೀಃ ಸಸಾರ ಸಮರೇ ಪ್ರಾಸೋದ್ಯತಕರೋ
ಹರೀನ್ ॥೮.೩೮॥
ರಾವಣನ ಮಗ ನರಾಂತಕ ಉತ್ಕೃಷ್ಟವಾದ ಕುದುರೆಯ ಮೇಲೆ ಕುಳಿತಿದ್ದ.
ಯಾವುದೇ ಭಯವಿಲ್ಲದೇ, ಪ್ರಾಸಾಯುಧವನ್ನು ಹಿಡಿದುಕೊಂಡು ಕಪಿಗಳನ್ನು ಯುದ್ಧದಲ್ಲಿ ಎದುರುಗೊಂಡ.
ತಂ ದಹನ್ತಮನೀಕಾನಿ ಯುವರಾಜೋsಙ್ಗದೋ ಬಲೀ ।
ಉತ್ಪಪಾತ ನಿರೀಕ್ಷ್ಯಾsಶು ಸಮದರ್ಶಯದಪ್ಯುರಃ ॥೮.೩೯॥
ಸೈನ್ಯವನ್ನೆಲ್ಲಾ ನಾಶಮಾಡುವ ಅವನನ್ನು ಯುವರಾಜನಾಗಿರುವ, ಬಲಿಷ್ಠನಾದ
ಅಂಗದನು ನೋಡಿ, ಅವನೆದುರು ನೆಗೆದು ಎದೆಯನ್ನು ತೋರಿದ.
ತಸ್ಯೋರಸಿ ಪ್ರಾಸವರಂ ಪ್ರಜಹಾರ ಸ
ರಾಕ್ಷಸಃ ।
ದ್ವಿಧಾ ಸಮಭವತ್ ತತ್ತು ವಾಲಿಪುತ್ರಸ್ಯ ತೇಜಸಾ ॥೮.೪೦॥
ಆಗ ನರಾಂತಕನು ಅವನ ಎದೆಗೆ ತನ್ನ ಪ್ರಾಸದಿಂದ ಹೊಡೆದ. ಅದಾದರೋ ಅಂಗದನ
ಶಕ್ತಿಯಿಂದ ಎರಡಾಗಿ ಸೀಳಿ ಹೋಯಿತು.
ಅಥಾಸ್ಯ ಹಯಮಾಶ್ವೇವ ನಿಜಘಾನ ಮುಖೇ
ಕಪಿಃ ।
ಪೇತತುಶ್ಚಾಕ್ಷಿಣೀ ತಸ್ಯ ಸ ಪಪಾತ
ಮಮಾರ ಚ ॥೮.೪೧॥
ನರಾಂತಕ ಪ್ರಾಸದಿಂದ ಹೊಡೆದಾಗ ಅಂಗದನು ನರಾಂತಕನ ಕುದುರೆಯ ಮುಖಕ್ಕೆ
ಹೊಡೆದ. ಆಗ ಆ ಕುದುರೆಯ ಕಣ್ಣುಗಳೆರಡು ಕೆಳಗೆ ಬಿದ್ದವು
ಮತ್ತು ಕುದುರೆ ಸಾವನ್ನಪ್ಪಿತು.
ಸ ಖಡ್ಗವರಮಾದಾಯ ಪ್ರಸಸಾರ ರಣೇ
ಕಪಿಮ್ ।
ಆಚ್ಛಿದ್ಯ ಖಡ್ಗಮಸ್ಯೈವ ನಿಹತೋ
ವಾಲಿಸೂನುನಾ ॥೮.೪೨॥
ಆಗ ನರಾಂತಕನು ಶ್ರೇಷ್ಠವಾದ ಕತ್ತಿಯನ್ನು ತೆಗೆದುಕೊಂಡು, ಯುದ್ಧದಲ್ಲಿ
ಅಂಗದನನ್ನು ಹೊಂದಿದನು. ಆಗ ವಾಲೀಪುತ್ರನಾದ ಅಂಗದನು ಅವನ ಕತ್ತಿಯನ್ನೇ ಸೆಳೆದು ನರಾಂತಕನನ್ನು ಕೊಂದನು.
ಕನ್ನಡ ಪದ್ಯರೂಪ : https://go-kula.blogspot.com/2018/06/8-35-42.html
No comments:
Post a Comment