ವಿದ್ರಾವಿತಾಖಿಲಕಪಿಂ ವರಾತ್
ತ್ರಿಶಿರಸಂ ವಿಭೋಃ ।
ಭಙ್ಕ್ತ್ವಾರಥಂ ಧನುಃ
ಖಡ್ಗಮಾಚ್ಛಿದ್ಯಾಶಿರಸಂ ವ್ಯಧಾತ್ ॥೮.೫೩॥
ಬ್ರಹ್ಮನ ವರದಿಂದ ಎಲ್ಲಾ ಕಪಿಗಳನ್ನೂ ಓಡಿಸಿದ ತ್ರಿಶಿರಸ ಎಂಬ ರಾಕ್ಷಸನ ರಥವನ್ನು, ಧನುಸ್ಸನ್ನು
ಮುರಿದ ಹನುಮಂತನು, ಅವನ ಖಡ್ಗವನ್ನು ಸೆಳೆದು, ಅವನ ಶಿರಸ್ಸನ್ನು ಕತ್ತರಿಸಿದನು.
ಯುದ್ಧೋನ್ಮತ್ತಶ್ಚ ಮತ್ತಶ್ಚ ಪಾರ್ವತೀವರದರ್ಪ್ಪಿತೌ
।
ಪ್ರಮಥನ್ತೌ ಕಪೀನ್ ಸರ್ವಾನ್ ಹತೌ
ಮಾರುತಿಮುಷ್ಟಿನಾ ॥೮.೫೪॥
ಎಲ್ಲಾ ಕಪಿಗಳನ್ನೂ ನಾಶ ಮಾಡುತ್ತಿರುವ, ಪಾರ್ವತೀದೇವಿಯ ವರದಿಂದ
ಅಹಂಕಾರಿಗಳಾಗಿರುವ, ‘ಯುದ್ಧೋನ್ಮತ್ತ’ ಹಾಗು ‘ಮತ್ತ’
ಎನ್ನುವ ಇಬ್ಬರು ರಾಕ್ಷಸರು ಹನುಮಂತನ ಮುಷ್ಟಿ ಪ್ರಹಾರದಿಂದ ಸತ್ತರು.
ತತೋsತಿಕಾಯೋsತಿರಥೋ
ರಥೇನ ಸ್ವಯಂಭುದತ್ತೇನ ಹರೀನ್ ಪ್ರಮೃದ್ನನ್ ।
ಚಚಾರ ಕಾಲಾನಲಸಿನ್ನಿಕಾಶೋ
ಗನ್ಧರ್ವಿಕಾಯಾಂ ಜನಿತೋ ದಶಾಸ್ಯಾತ್ ॥೮.೫೫॥
ತದನಂತರ, ರಾವಣನಿಂದ ಗಂಧರ್ವೀಯಲ್ಲಿ^ ಹುಟ್ಟಿರುವ ಅತಿಕಾಯನು, ಬ್ರಹ್ಮವರದ ಬಲದಿಂದ ಕಪಿಗಳನ್ನು ಚಂಡಾಡುತ್ತಾ, ಪ್ರಳಯಕಾಲದ ಬೆಂಕಿಗೆ ಸಮನಾಗಿ
ಯುದ್ಧಭೂಮಿಯಲ್ಲಿ ಓಡಾಡಿದನು.
(^ಗಂಧರ್ವೀ ಎಂದರೆ
ಮೊದಲು ಗಂಧರ್ವನ ಹೆಂಡತಿಯಾಗಿದ್ದವಳು. ಅಂತಹ ಗಂಧರ್ವೀಯನ್ನು ಬಲಾತ್ಕಾರದಿಂದ ತಂದು ರಾವಣ
ಮದುವೆಯಾಗಿದ್ದ. ಅವಳಲ್ಲಿ ರಾವಣನಿಗೆ ಹುಟ್ಟಿದವನು ಅತಿಕಾಯ )
ಬೃಹತ್ತನುಃ ಕುಮ್ಭವದೇವ ಕರ್ಣ್ಣಾವಸ್ಯೇತ್ಯತೋ
ನಾಮ ಚ ಕುಮ್ಭಕರ್ಣ್ಣಃ ।
ಇತ್ಯಸ್ಯ ಸೋsರ್ಕ್ಕಾತ್ಮಜಪೂರ್ವಕಾನ್ ಕಪೀನ್ ಜಿಗಾಯ ರಾಮಂ
ಸಹಸಾsಭ್ಯಧಾವತ್ ॥೮.೫೬॥
ಬಹಳ ದೊಡ್ಡ ದೇಹವುಳ್ಳ ಅತಿಕಾಯನಿಗೆ ಮಡಿಕೆಯಂತಹ ಕಿವಿಗಳಿದ್ದವು. ಈ
ಕಾರಣದಿಂದ ಅವನನ್ನು ಕುಂಭಕರ್ಣ^ ಎಂದೂ ಕರೆಯುತ್ತಿದ್ದರು. ಇಂತಹ ಅತಿಕಾಯ ಸುಗ್ರೀವ ಮೊದಲಾದ ಕಪಿಗಳನ್ನು ಗೆದ್ದು, ವೇಗವಾಗಿ ರಾಮಚಂದ್ರನನ್ನು
ಎದುರುಗೊಳ್ಳಲು ಹೊರಟ.
(^ಇವನು ರಾವಣನ ತಮ್ಮನಾದ ಕುಂಭಕರ್ಣನಲ್ಲ. ಈತ ರಾವಣನ ಮಗನಾದ ಅತಿಕಾಯ.
ಆತನಿಗೆ ಕುಂಭಕರ್ಣ ಎನ್ನುವ ಅಡ್ಡ ಹೆಸರಿತ್ತು ಅಷ್ಟೇ)
ತಮಾಪತನ್ತಂ ಶರವರ್ಷಧಾರಂ ಮಹಾಘನಾಭಂ
ಸ್ತನಯಿತ್ನುಘೋಷಮ್ ।
ನಿವಾರಯಾಮಾಸ ಯಥಾ ಸಮೀರಃ
ಸೌಮಿತ್ರಿರಾತ್ತೇಷ್ವಸನಃ ಶರೌಘೈಃ ॥೮.೫೭॥
ಬಾಣಗಳ ಮಳೆಗೆರೆಯುವ, ದೊಡ್ಡ ಮೋಡದಂತೆ ಇರುವ, ಸಿಡಿಲಿನಂತೆ ಆರ್ಭಟಿಸುತ್ತಾ
ಬರುತ್ತಿರುವ ಆ ಅತಿಕಾಯನನ್ನು, ಧನುರ್ಧಾರೀ ಲಕ್ಷ್ಮಣನು ತನ್ನ ಬಾಣಗಳಿಂದ ತಡೆದನು.
No comments:
Post a Comment