ಅಥೋ ಹನೂಮಾನುರಗೇನ್ದ್ರಭೋಗಸಮಂ
ಸ್ವಬಾಹುಂ ಭೃಶಮುನ್ನಮಯ್ಯ ।
ತತಾಡ ವಕ್ಷಸ್ಯದಿಪಂ ತು ರಕ್ಷಸಾಂ
ಮುಖೈಃ ಸ ರಕ್ತಂ ಪ್ರವಮನ್ ಪಪಾತ ॥೮.೭೭॥
ತದನಂತರ ಹನುಮಂತನು ರಾವಣನನ್ನು ಎದುರುಗೊಂಡು, ಸರ್ಪದ ಶರೀರದಂತಿರುವ
ತನ್ನ ಕೈಯನ್ನು ಎತ್ತಿ, ರಾವಣನ ಎದೆಗೆ ಗುದ್ದಿದನು. ಇದರಿಂದ ರಾವಣನು ತನ್ನ ಹತ್ತೂ ಮುಖಗಳಿಂದ
ರಕ್ತವನ್ನು ವಾಂತಿ ಮಾಡಿಕೊಂಡು ಮೂರ್ಛಿತನಾದನು.
ಸ ಲಬ್ಧಸಙ್ಜ್ಞಃ ಪ್ರಶಶಂಸ ಮಾರುತಿಂ
ತ್ವಯಾ ಸಮೋ ನಾಸ್ತಿ ಪುಮಾನ್ ಹಿ ಕಶ್ಚಿತ್ ।
ಕಃ ಪ್ರಾಪಯೇದನ್ಯ ಇಮಾಂ ದಶಾಂ
ಮಾಮಿತೀರಿತೋ ಮಾರುತಿರಾಹ ತಂ ಪುನಃ ॥೮.೭೮॥
ಪ್ರಜ್ಞೆ ಬಂದ ನಂತರ ರಾವಣನು ಹನುಮಂತನನ್ನು ಹೊಗಳುತ್ತಾ ಹೇಳುತ್ತಾನೆ:
“ನಿನಗೆ ಸಮನಾಗಿರುವ, ಬಲಿಷ್ಠನಾದ ಪುರುಷನು ಇಲ್ಲವೇ ಇಲ್ಲಾ. ನನಗೆ ಈ ಅವಸ್ಥೆಯನ್ನು ಯಾರು ತಾನೇ
ಹೊಂದಿಸಬಲ್ಲರು” ಎಂದು. ಈ ರೀತಿಯಾಗಿ ಹೇಳಲ್ಪಟ್ಟಾಗ
ಮಾರುತಿಯು ರಾವಣನನ್ನು ಕುರಿತು ಹೀಗೆ ಹೇಳುತ್ತಾನೆ:
ಅತ್ಯಲ್ಪಮೇತದ್ ಯದುಪಾತ್ತಜೀವಿತಃ
ಪುನಸ್ತ್ವಮಿತ್ಯುಕ್ತ ಉವಾಚ ರಾವಣಃ ।
ಗೃಹಾಣ ಮತ್ತೋsಪಿ ಸಮುದ್ಯತಂ ತ್ವಂ ಮುಷ್ಟಿಪ್ರಹಾರಂ
ತ್ವಿತಿ ತಂ ಪುಪೋಥ ॥೮.೭೯॥
“ನಾನು ಹೊಡೆದ ಮೇಲೂ ನೀನು ಬದುಕಿದ್ದೀಯೆಂದರೆ, ನಾನು ಕೊಟ್ಟ
ಪ್ರಹಾರವು ಅತ್ಯಲ್ಪವೆಂದು ತಿಳಿ” ಎಂದು ಮಾರುತಿಯು ಹೇಳಲು, ರಾವಣ “ನಾನೂ ಹೊಡೆಯುತ್ತೇನೆ,
ನನ್ನಿಂದ ಏಟನ್ನು ಸ್ವೀಕರಿಸು” ಎಂದು ಗಟ್ಟಿಯಾಗಿ ಮಾರುತಿಗೆ ಮುಷ್ಟಿ ಪ್ರಹಾರ ಮಾಡುತ್ತಾನೆ.
ಕಿಞ್ಚಿತ್ ಪ್ರಹಾರೇಣ ತು
ವಿಹ್ವಲಾಙ್ಗವತ್ ಸ್ಥಿತೇ ಹಿ ತಸ್ಮಿನ್ನಿದಮನ್ತರಂ ಮಮ ।
ಇತ್ಯಗ್ನಿಸೂನುಂ ಪ್ರಯಯೌ ಸ ರಾವಣೋ
ನಿವಾರಿತೋ ಮಾರುತಿನಾsಪಿ ವಾಚಾ ॥೮.೮೦॥
ರಾವಣನು ಬಲವಾಗಿ ಹೊಡೆದುದ್ದರಿಂದ ಹನುಮಂತನು ಸ್ವಲ್ಪ ಭ್ರಾಂತನಂತೆ (ಸುಸ್ತಾದವನಂತೆ)
ಇರುತ್ತಿರಲು, ಇದೇ ತಕ್ಕ ಸಮಯ ಎಂದು ತಿಳಿದ ರಾವಣನು, ಹನುಮಂತ ‘ನಿಲ್ಲು’ ಎಂದು ಕೂಗಿದರೂ ಕೇಳದೆ,
ಅಗ್ನಿಪುತ್ರ ನೀಲನನ್ನು ಕುರಿತು ತೆರಳುತ್ತಾನೆ.
ತಮಾಪತನ್ತಂ ಪ್ರಸಮೀಕ್ಷ್ಯ ನೀಲೋ
ಧನುರ್ಧ್ವಜಾಗ್ರಾಶ್ವರಥೇಷು ತಸ್ಯ ।
ಚಚಾರ ಮೂರ್ದ್ಧಸ್ವಪಿ ಚಞ್ಚಲೋsಲಂ ಜಳೀಕೃತಸ್ತೇನ ಸ ರಾವಣೋsಪಿ ॥೮.೮೧॥
ತನ್ನತ್ತ ಬರುತ್ತಿರುವ ರಾವಣನನ್ನು ನೋಡಿದ ನೀಲನು, ರಾವಣನ ಧನುಸ್ಸಿನ ಮೇಲೆ,
ದ್ವಜದಮೇಲೆ, ರಥದ ಮೇಲೆ, ಹೀಗೆ ಒಂದು ಕಡೆ ನಿಲ್ಲದೇ, ಎಲ್ಲಾ ಕಡೆ ಹಾರಾಡುತ್ತಾನೆ. ಎಷ್ಟೋ ಸಲ
ರಾವಣನ ತಲೆಯಮೇಲೂ ಆತ ನೆಗೆದು ಕುಳಿತು ರಾವಣನನ್ನು
ಕಂಗೆಡಿಸುತ್ತಾನೆ. ಹೀಗೆ ಒಂದು ಕಡೆ ನಿಲ್ಲದ ನೀಲನ ಚಟುವಟಿಕೆಯಿಂದ ರಾವಣ ಏನು ಮಾಡಬೇಕು ಎಂದು
ತಿಳಿಯದವನಾದನು(ವಿವೇಕಶೂನ್ಯನಾದನು).
ಸ ಕ್ಷಿಪ್ರಮಾದಾಯ ಹುತಾಶನಾಸ್ತ್ರಂ
ಮುಮೋಚ ನೀಲೇ ರಜನೀಚರೇಶಃ ।
ಸ ತೇನ ಭೂಮೌ ಪತಿತೋ ನಚೈನಂ ದದಾಹ
ವಹ್ನಿಃ ಸ್ವತನುರ್ಯ್ಯತೋsಸೌ ॥೮.೮೨॥
ತದನಂತರ ರಾವಣನು ನೀಲನಿಂದ ಒಂದು ಅಂತರವನ್ನು ಸಾಧಿಸಿ, ತನ್ನ ಆಗ್ನೇಯಾಸ್ತ್ರವನ್ನು
ಅಭಿಮಂತ್ರಿಸಿ, ನೀಲನ ಮೇಲೆ ಪ್ರಯೋಗಿಸಿದನು. ಆ ಅಸ್ತ್ರದಿಂದ ಹೊಡೆಯಲ್ಪಟ್ಟ ನೀಲನು ಭೂಮಿಯ ಮೇಲೆ ಬಿದ್ದನು.
ಆದರೆ ಸ್ವಯಂ ಅಗ್ನಿಯಾಗಿರುವ ಆತನನ್ನು ಬೆಂಕಿ ಸುಡಲಿಲ್ಲ.

ಕನ್ನಡ ಪದ್ಯರೂಪ: https://go-kula.blogspot.com/2018/06/8-77-82.html

No comments:
Post a Comment