ಇತ್ಯುಕ್ತೋ ಜಾಮ್ಬವಾನಾಹ
ಹನೂಮನ್ತಮನನ್ತರಮ್ ।
ಯೋsಸೌ ಮೇರೋಃ ಸಮೀಪಸ್ಥೋ ಗನ್ಧಮಾದನಸಙ್ಜ್ಞಿತಃ
।
ಗಿರಿಸ್ತಸ್ಮಾತ್ ಸಮಾಹಾರ್ಯಂ
ತ್ವಯೌಷಧಚತುಷ್ಟಯಮ್ ॥೮.೧೫೨॥
“ನಾನಿದ್ದೇನೆ” ಎಂದು ಹನುಮಂತ ಹೇಳಲು, ಜಾಂಬವಂತ ಹನುಮಂತನನ್ನು
ಕುರಿತು: “ಮೇರುವಿನ ಸಮೀಪದಲ್ಲಿ ಗನ್ಧಮಾದನ ಎಂಬ ಹೆಸರುಳ್ಳ ಪರ್ವತವಿದೆ. ಅಲ್ಲಿ ನಾಲ್ಕು ಔಷಧವಿದೆ. ಅದನ್ನು ತರಬೇಕು” ಎಂದು ಹೇಳಿದನು.
ಮೃತಸಞ್ಜೀವನೀ ಮುಖ್ಯಾ ಸನ್ಧಾನಕರಣೀ
ಪರಾ ।
ಸವರ್ಣ್ಣಕರಣೀ ಚೈವ ವಿಶಲ್ಯಕರಣೀತಿ ಚ ॥೮.೧೫೩॥
ಮುಖ್ಯವಾಗಿ ಮೃತಸಂಜೀವನಿ ಎನ್ನುವ ಸತ್ತವರನ್ನು ಬದುಕಿಸುವ ಔಷಧ,
ಬಿಟ್ಟುಹೋದ ಅಂಗಾಂಗವನ್ನು ಸೇರಿಸುವ ಸನ್ಧಾನಕರಣೀ, ಬಣ್ಣವ್ಯತ್ಯಾಸ ಸರಿ ಪಡಿಸುವ ಸವರ್ಣ್ಣಕರಣೀ ಮತ್ತು ದೇಹದಲ್ಲಿ ಸೇರಿಕೊಂಡ ಬಾಣಮೊದಲಾದ
ಆಯುಧ ಭಾಗವನ್ನು ತೆಗೆಯಲು ವಿಶಲ್ಯಕರಣೀ ಎನ್ನುವ ನಾಲ್ಕು ವಿಧದ ಔಷಧವನ್ನು ಜಾಂಬವಂತ
ಉಲ್ಲೇಖಿಸುತ್ತಾನೆ.
ಇತ್ಯುಕ್ತಃ ಸ ಕ್ಷಣೇನೈವ ಪ್ರಾಪತದ್
ಗನ್ಧಮಾದನಮ್ ।
ಅವಾಪ ಚಾಮ್ಬರಚರೋ ರಾಮಮುಕ್ತಃ ಶರೋ
ಯಥಾ ॥೮.೧೫೪॥
ಈರೀತಿಯಾಗಿ ಹೇಳಲ್ಪಟ್ಟ ಹನುಮಂತನು ಆ ಕ್ಷಣದಲ್ಲಿಯೇ, ರಾಮ ಬಿಟ್ಟ ಬಾಣ
ಹೇಗೆ ವೇಗದಿಂದ ಹೋಗುತ್ತದೋ ಹಾಗೇ ಗನ್ಧಮಾದನವನ್ನು ಕುರಿತು ಆಕಾಶದಲ್ಲಿ ನೆಗೆದನು.
ಅನ್ತರ್ಹಿತಾಶ್ಚೌಷಧೀಸ್ತು ತದಾ
ವಿಜ್ಞಾಯ ಮಾರುತಿಃ ।
ಉದ್ಬಬರ್ಹ ಗಿರಿಂ
ಕ್ರೋಧಾಚ್ಛತಯೋಜನಮಣ್ಡಲಮ್ ॥೮.೧೫೫॥
ಔಷಧಗಳೆಲ್ಲವೂ ಅಡಗಿಕೊಂಡಿವೆ ಎಂದು ತಿಳಿದ ಹನುಮಂತನು, ನೂರು ಯೋಜನಾ
ಸುತ್ತಳತೆ ಇರುವ ಬೆಟ್ಟವನ್ನು ಸಿಟ್ಟಿನಿಂದ ಎತ್ತಿದನು.
ಸ ತಂ ಸಮುತ್ಪಾಟ್ಯ ಗಿರಿಂ ಕರೇಣ
ಪ್ರತೋಳಯಿತ್ವಾ ಬಲದೇವಸೂನುಃ ।
ಸಮುತ್ಪಾತಾಮ್ಬರಮುಗ್ರವೇಗೋ ಯಥಾ
ಹರಿಶ್ಚಕ್ರಧರಸ್ತ್ರಿವಿಕ್ರಮೇ ॥೮.೧೫೬॥
ಆ ಬೆಟ್ಟವನ್ನು ಕಿತ್ತು ಕೈಯಲ್ಲಿ ಹಿಡಿದ ಹನುಮಂತನು, ಆಕಾಶವನ್ನು
ಉಗ್ರವೇಗನಾಗಿ ಜಿಗಿದ. ಯಾವ ರೀತಿ ನಾರಾಯಣನು ವಾಮನಾವತಾರದಲ್ಲಿ, ಮೂರು ಲೋಕವನ್ನು ಅಳೆಯುವಾಗ,
ಎಷ್ಟು ವೇಗವಾಗಿ ವ್ಯಾಪಿಸಿದ್ದನೋ ಆ ರೀತಿಯ
ವೇಗದಲ್ಲಿ ಹನುಮಂತ ಜಿಗಿದ.
ಅವಾಪ ಚಾಕ್ಷ್ಣೋಃ ಸ ನಿಮೇಷಮಾತ್ರತೋ
ನಿಪಾತಿತಾ ಯತ್ರ ಕಪಿ ಪ್ರವೀರಾಃ ।
ತಚ್ಛೈಲವಾತಸ್ಪರ್ಶಾತ್ ಸಮುತ್ಥಿತಾಃ
ಸಮಸ್ತಶೋ ವಾನರಯೂಥಪಾಃ ಕ್ಷಣಾತ್ ॥೮.೧೫೭॥
ನಿಮಿಷಮಾತ್ರದಲ್ಲಿ ಎಲ್ಲಿ ಕಪಿಗಳು ಬಿದ್ದಿದ್ದರೋ ಆ ಸ್ಥಳಕ್ಕೆ
ಹನುಮಂತ ಬಿಟ್ಟವನ್ನು ಕೈಯಲ್ಲಿ ಹಿಡಿದು ಬಂದ. ಆ ಬೆಟ್ಟವನ್ನು ಬಳಸಿದ
ಗಾಳಿಯ ಸ್ಪರ್ಶದಿಂದ, ಕ್ಷಣಮಾತ್ರದಲ್ಲಿ ಕಪಿನಾಯಕರು ಎದ್ದು ನಿಂತರು.
ಅಪೂಜಯನ್ಮಾರುತಿಮುಗ್ರಪೌರುಷಂ
ರಘೂತ್ತಮೋsಸ್ಯಾನುಜನಿಸ್ತಥಾsಪರೇ ।
ಪಪಾತ ಮೂರ್ಧ್ನ್ಯಸ್ಯ ಚ
ಪುಷ್ಪಸನ್ತತಿಃ ಪ್ರಮೋದಿತೈರ್ದೇವವರೈರ್ವಿಸರ್ಜ್ಜಿತಾ ॥೮.೧೫೮॥
ಆ ರೀತಿ ಉಗ್ರವಾದ ಪರಾಕ್ರಮವುಳ್ಳ ಹನುಮಂತನನ್ನು ರಾಮಚಂದ್ರ, ಲಕ್ಷಣ,
ಸುಗ್ರೀವ ಮೊದಲಾದವರು ಕೊಂಡಾಡಿದರು. ಸಂತಸಗೊಂಡ ದೇವತೆಗಳು ಮಾಡಿದ ಪುಷ್ಪವೃಷ್ಟಿ ಹನುಮಂತನ ತಲೆಯಮೇಲೆ ಬಿತ್ತು.
ಕನ್ನಡ ಪದ್ಯರೂಪ: https://go-kula.blogspot.com/2018/07/8-152-158.html
ಕನ್ನಡ ಪದ್ಯರೂಪ: https://go-kula.blogspot.com/2018/07/8-152-158.html
No comments:
Post a Comment