ಅಮೋಘಶೂಲಂ ಪ್ರಪತತ್ ತದೀಕ್ಷ್ಯ ರವೇಃ
ಸುತಸ್ಯೋಪರಿ ಮಾರುತಾತ್ಮಜಃ ।
ಪ್ರಗೃಹ್ಯ ಜಾನೌ ಪ್ರಣಿಧಾಯ ಶೀಘ್ರಂ
ಬಭಞ್ಜ ತಂ ಪ್ರೇಕ್ಷ್ಯ ನನಾದ ಚೋಚ್ಚೈಃ ॥೮.೧೧೮॥
ಎಂದೂ ವ್ಯರ್ಥವಾಗದ ಶೂಲವು ಸುಗ್ರೀವನ ಮೇಲೆ ಬೀಳುತ್ತಿರುವುದನ್ನು ನೋಡಿದ ಹನುಮಂತನು, ತಕ್ಷಣ ಆ ಶೂಲವನ್ನು ಹಿಡಿದು, ಅದನ್ನು ತನ್ನ ಮಂಡಿಯಿಂದ ಮುರಿದು, ಕುಂಭಕರ್ಣನನ್ನು ನೋಡಿ ಗಟ್ಟಿಯಾಗಿ ಘರ್ಜಿಸಿದನು.
ಅಥೈನಮಾವೃತ್ಯ ಜಘಾನ ಮುಷ್ಟಿನಾ ಸ
ರಾಕ್ಷಸೋ ವಾಯುಸುತಂ ಸ್ತನಾನ್ತರೇ ।
ಜಗರ್ಜ್ಜ ತೇನಾಭಿಹತೋ ಹನೂಮಾನಚಿನ್ತಯಂಸ್ತತ್
ಪ್ರಜಹಾರ ಚೈನಮ್ ॥೮.೧೧೯॥
ಇದ್ದಕ್ಕಿದ್ದಂತೆ ಹನುಮಂತ ಎದುರು ಬಂದ್ದದ್ದನ್ನು ಕಂಡ ಕುಂಭಕರ್ಣನು,
ತನ್ನ ಮುಷ್ಟಿಯನ್ನು ತಿರುಗಿಸಿ, ವಾಯುಪುತ್ರನ ಎದೆಗೆ
ಗುದ್ದಿದನು ಮತ್ತು ಗಟ್ಟಿಯಾಗಿ ಕಿರುಚಿದನು. ಅವನಿಂದ ಹೊಡೆಯಲ್ಪಟ್ಟ
ಹನುಮಂತನು ಸ್ವಲ್ಪವೂ ವಿಚಲಿತನಾಗದೇ(ಹೊಡೆತವನ್ನು ಗಣನೆಗೇ ತೆಗೆದುಕೊಳ್ಳದೇ), ತಿರುಗಿ ಕುಂಭಕರ್ಣನಿಗೆ
ಹೊಡೆದನು.
ತಳೇನ ವಕ್ಷಸ್ಯಭಿತಾಡಿತೋ ರುಷಾ
ಹನೂಮತಾ ಮೋಹಮವಾಪ ರಾಕ್ಷಸಃ ।
ಪುನಶ್ಚ ಸಙ್ಜ್ಞಾಂ ಸಮವಾಪ್ಯ ಶೀಘ್ರಂ
ಯಯೌ ಸ ಯತ್ರೈವ ರಘುಪ್ರವೀರಃ ॥೮.೧೨೦॥
ಹನುಮಂತನ ಕೈಯ ತಳದಿಂದ ಎದೆಗೆ ಹೊಡೆಯಲ್ಪಟ್ಟ ರಾಕ್ಷಸನು ಮೂರ್ಛೆಹೊಂದಿದನು.
ಪುನಃ ಎಚ್ಚರಗೊಂಡ ಕುಂಭಕರ್ಣನು, ಎಲ್ಲಿ ರಾಮಚಂದ್ರನಿದ್ದಾನೋ
ಅಲ್ಲಿಗೆ ಹೊರಟುಹೋದನು.
ವಿಚಿನ್ತಯಾಮಾಸ ತತೋ ಹನೂಮನ್ ಮಯೈವ
ಹನ್ತುಂ ಸಮರೇ ಹಿ ಶಕ್ಯಃ ।
ಅಸೌ ತಥಾsಪ್ಯೇನಮಹಂ ನ ಹನ್ಮಿ ಯಶೋ ಹಿ ರಾಮಸ್ಯ ದೃಢಂ
ಪ್ರಕಾಶಯನ್ ॥೧.೧೨೧॥
ಅನನ್ಯವಧ್ಯಂ ತಮಿಮಂ ನಿಹತ್ಯ ಸ್ವಯಂ
ಸ ರಾಮೋ ಯಶ ಆಹರೇತ ।
ದತ್ತೋ ವರೋ ದ್ವಾರಪಯೋಃ ಸ್ವಯಂ ಚ ಜನಾರ್ದ್ದನೇನೈವ ಪುರಾತತಶ್ಚ ॥೮.೧೨೨ ॥
“ಇವನನ್ನು ನಾನೇ ಕೊಲ್ಲಬಹುದು. ಆದರೆ ರಾಮನ
ಯಶಸ್ಸನ್ನು ಪ್ರಕಾಶಪಡಿಸಲಿಕ್ಕಾಗಿ ಇವನನ್ನು ಕೊಲ್ಲುವುದಿಲ್ಲ”
ಎಂದು ಹನುಮಂತ ಚಿಂತಿಸಿದನು.
[ಈ ಮಾತನ್ನು ಮಹಾಭಾರತದ ವನಪರ್ವದಲ್ಲಿ ಹನುಮಂತ ಭೀಮಸೇನನಿಗೆ ಹೇಳುವುದನ್ನು
ನಾವು ಕಾಣಬಹುದು].
“ಬೇರೆ ಯಾರೂ ಕೊಲ್ಲಲು ಸಾಧ್ಯವಾಗದ ಇವನನ್ನು ಕೊಂದು, ರಾಮನು ಕೀರ್ತಿ
ಪ್ರಕಾಶಿಸಲಿ. ಹಿಂದೆ ಜನಾರ್ದನನಿಂದ ಈ ದ್ವಾರಪಾಲಕರಿಗೆ(ಶಾಪಗ್ರಸ್ಥ
ಜಯ-ವಿಜಯರಾದ ರಾವಣ-ಕುಭಾಕರ್ಣರಿಗೆ) ‘ಮುಂದೆ ನಾನೇ
ನಿಮ್ಮನ್ನು ಕೊಲ್ಲುತ್ತೇನೆ’ ಎನ್ನುವ ವರವು ಕೊಡಲ್ಪಟ್ಟಿದೆ. ಆ ಕಾರಣದಿಂದಲೂ ನಾನು ಕೊಲ್ಲುವುದಿಲ್ಲ”
ಎಂದು ಹನುಮಂತ ಚಿಂತಿಸಿದ.
ಮಯೈವ ವದ್ಧ್ಯೌ ಭವತಂ ತ್ರಿಜನ್ಮಸು ಪ್ರವೃದ್ಧವೀರ್ಯ್ಯಾವಿತಿ
ಕೇಶವೇನ ।
ಉಕ್ತಂ
ಮಮೈವೈಷ ಯದಪ್ಯನುಗ್ರಹಂ ವಧೇsಸ್ಯ ಕುರ್ಯ್ಯಾನ್ನತು ಮೇ ಸ ಧರ್ಮ್ಮಃ ॥೮.೧೨೩॥
ಇತಿ ಸ್ಮ ಸಞ್ಚಿನ್ತ್ಯ ಕಪೀಶಯುಕ್ತೋ
ಜಗಾಮ ಯತ್ರೈವ ಕಪಿಪ್ರವೀರಾಃ ।
ಸ ಕುಮ್ಭಕ ರ್ಣ್ಣೋsಖಿಲವಾನರಾಂಸ್ತು ಪ್ರಭಕ್ಷಯನ್ ರಾಮಮುಪಾಜಗಾಮ ॥೮.೧೨೪॥
“ ‘ಮೂರು ಜನ್ಮಗಳಲ್ಲಿ ಅತ್ಯಂತ ಬಲಿಷ್ಠರಾದ ನೀವು ನನ್ನಿಂದಲೇ ಸಂಹರಿಸಲ್ಪಡುವಿರಿ’
ಎಂದು ಕೇಶವನೇ ಹೇಳಿದ್ದಾನೆ. ಹೀಗಿರುವಾಗ ಈಗ ನಾನು ಇವನನ್ನು ಕೊಲ್ಲಬೇಕು ಎಂದು ಸಂಕಲ್ಪಿಸಿದರೆ,
ದೇವರು ನನಗೆ ಅನುಗ್ರಹ ಮಾಡುತ್ತಾನೆ. ಆದರೆ ಹಾಗೆ ಮಾಡುವುದು ನನ್ನ ಧರ್ಮವಲ್ಲ” ಎಂದು ಚಿಂತಿಸಿದ ಹನುಮಂತನು, ಸುಗ್ರೀವನನ್ನು ಕೂಡಿಕೊಂಡು ಬೇರೆ ಕಪಿಗಳಿದ್ದೆಡೆಗೆ ತೆರಳಿದನು. ಇತ್ತ ಕುಂಭಕರ್ಣನು ದಾರಿಯಲ್ಲಿ
ಎದುರಾದ ಕಪಿಗಳನ್ನು ತಿನ್ನುತ್ತಾ, ರಾಮನ ಬಳಿ ತೆರಳಿದನು.
ಕನ್ನಡ ಪದ್ಯರೂಪ: https://go-kula.blogspot.com/2018/07/8-118-124.html
No comments:
Post a Comment