ಅಥೋ ನಿಬದ್ಧ್ಯಾsಶು ಹರೀನ್ ಸಲಕ್ಷ್ಮಣಾನ್ ಜಗಾಮ ರಕ್ಷಃ
ಸ್ವಪಿತುಃ ಸಕಾಶಮ್ ।
ನನನ್ದ ಚಾಸೌ ಪಿಶಿತಾಶನೇಶ್ವರಃ ಶಶಂಸ
ಪುತ್ರಂ ಚ ಕೃತಾತ್ಮಕಾರ್ಯ್ಯಮ್ ॥೮.೧೪೩॥
ಲಕ್ಷ್ಮಣ ಸಹಿತ ಎಲ್ಲರನ್ನೂ ಕಟ್ಟಿಹಾಕಿದ ಇಂದ್ರಜಿತ್ ರಾವಣನ ಬಳಿ
ತೆರಳಿದ. ಪಿಶಿತಾಶರ (ಮಾಂಸವನ್ನು ತಿನ್ನುವವರ) ಒಡೆಯನಾದ ರಾವಣನು ತನ್ನ ಪುತ್ರನ ಯಶಸ್ಸನ್ನು
ನೋಡಿ ಬಹಳ ಸಂತಸಪಟ್ಟು, ಪುತ್ರನನ್ನು ಚನ್ನಾಗಿ
ಹೊಗಳಿದನು.
ಸ ಪಕ್ಷಿರಾಜೋsಥ ಹರೇರ್ನ್ನಿದೇಶಂ ಸ್ಮರಂಸ್ತ್ವರಾವಾನಿಹ ಚಾsಜಗಾಮ ।
ತತ್ಪಕ್ಷವಾತಸ್ಪರ್ಶೇನ ಕೇವಲಂ
ವಿನಷ್ಟ ಏಷಾಂ ಸ ಉರಙ್ಗಬನ್ಧಃ ॥೮.೧೪೪॥
ಆಗ ಗರುಡನು ನಾರಾಯಣನ ಆದೇಶವನ್ನು ನೆನಪಿಸಿಕೊಳ್ಳುತ್ತಾ, ವೇಗದಲ್ಲಿ ಈ
ಸ್ಥಳಕ್ಕೆ ಬಂದನು. ಅವನ ರೆಕ್ಕೆಯ ಗಾಳಿಯ ಸ್ಪರ್ಶದಿಂದ ಎಲ್ಲರ ಸರ್ಪಬಂಧವು ನಾಶವಾಯಿತು.
ಸ ರಾಮಮಾನಮ್ಯ ಪರಾತ್ಮದೈವತಂ ಯಯೌ
ಸುಮಾಲ್ಯಾಭರಣಾನುಲೇಪನಃ ।
ಕಪಿಪ್ರವೀರಾಶ್ಚ ತರೂಞ್ಛೆಲಾಶ್ಚ
ಪ್ರಗೃಹ್ಯ ನೇದುರ್ಬಲಿನಃ ಪ್ರಹೃಷ್ಟಾಃ ॥೮.೧೪೫॥
ಒಳ್ಳೆಯ ಮಾಲೆ, ಆಭರಣ,
ಗಂಧ ಮೊದಲಾದವುಗಳಿಂದ ಭೂಷಿತನಾಗಿದ್ದ ಗರುಡ ಹಿರಿಯನಾಗಿರುವ, ತನಗೂ ದೈವವಾದ ರಾಮಚಂದ್ರನಿಗೆ
ನಮಸ್ಕರಿಸಿ, ತನ್ನ ಲೋಕಕ್ಕೆ ತೆರಳಿದನು. ಸರ್ಪಪಾಶದಿಂದ ಮುಕ್ತರಾದ ಶ್ರೇಷ್ಠ ಕಪಿಗಳು ಮರಗಳನ್ನೂ
ಬಂಡೆಗಳನ್ನೂ ಹಿಡಿದು, ಚೇತರಿಕೆಯ ಬಲದಿಂದ, ಸಂತಸದಿಂದ ಗಟ್ಟಿಯಾಗಿ ಕಿರುಚಿದರು.
ಶ್ರುತ್ವಾ ನಿನಾದಂ ಪ್ಲವಗೇಶ್ವರಾಣಾಂ
ಪುನಃ ಸಪುತ್ರೋsತ್ರಸದತ್ರ ರಾವಣಃ
।
ಬನ್ಧಾದಮುಷ್ಮಾತ್
ಪ್ರತಿನಿಸ್ಸೃತಾಸ್ತೇ ಕಿಮತ್ರ ಕಾರ್ಯ್ಯಂ ತ್ವಿತಿ ಚಿನ್ತಯಾನಃ ॥೮.೧೪೬॥
ಕಪಿಗಳ ಗರ್ಜನೆಯನ್ನು ಕೇಳುತ್ತಿದ್ದಂತೆ, ಇಂದ್ರಜಿತುವಿನಿಂದ ಕೂಡಿದ
ರಾವಣನು ಮುಂದೇನು ಮಾಡುವುದು ಎನ್ನುವ ಚಿಂತೆಯಿಂದ
ಭಯಗೊಂಡನು.
ಕನ್ನಡ ಪದ್ಯರೂಪ: https://go-kula.blogspot.com/2018/07/8-143-146.html
No comments:
Post a Comment