ಯೋಜನಾನಾಂ ತ್ರಿಲಕ್ಷಂ ಹಿ ಕುಮ್ಭಕರ್ಣ್ಣೋವ್ಯವರ್ದ್ಧತ
।
ಪೂರ್ವಂ ಪಶ್ಚಾತ್ ಸಞ್ಚುಕೋಚ
ಲಙ್ಕಾಯಾಮುಷಿತುಂ ಸ್ವಯಮ್ ॥೮.೧೩೨॥
ಈ ಹಿಂದೆ ಕುಂಭಕರ್ಣನು, ಯೋಜನಗಳ ಮೂರು ಲಕ್ಷ ಪರ್ಯಂತ ಬೆಳೆದಿದ್ದ(ಅಷ್ಟು
ದೊಡ್ಡ ದೇಹ ಉಳ್ಳವನಾಗಿದ್ದ). ತದನಂತರ ತಾನು ಲಂಕೆಯಲ್ಲಿ ವಾಸ ಮಾಡುವುದಕ್ಕೋಸ್ಕರ, ತನ್ನ ದೇಹವನ್ನು ಸಂಕೋಚ ಮಾಡಿಕೊಂಡಿದ್ದ.
ಸ ತು ಸ್ವಭಾವಮಾಪನ್ನೋ ಮ್ರಿಯಮಾಣೋ
ವ್ಯವರ್ದ್ಧತ ।
ತೇನಾಸ್ಮಿನ್ ಪತಿತೇ ತ್ವಬ್ದಿರವರ್ದ್ಧದಧಿಕಂ
ತದಾ ॥೮.೧೩೩॥
ಸಾಯುವ ಮುನ್ನ ಕುಂಭಕರ್ಣನು ತನ್ನ ಪೂರ್ವ ಸ್ವಭಾವವನ್ನು ಹೊಂದಿದವನಾಗಿ,
ತನ್ನ ನಿಜವಾದ ಆಕಾರಕ್ಕೆ ಬೆಳೆದೇ ಸತ್ತುಬಿದ್ದನು.
ಆ ಕಾರಣದಿಂದ ಅವನು ಬೀಳುತ್ತಿದ್ದಂತೆ ಸಮುದ್ರವು ಉಕ್ಕೇರಿತು.
ಅಥಾಪರೇ ಯೇ ರಜನೀಚರಾಸ್ತದಾ
ಕಪಿಪ್ರವೀರೈರ್ನ್ನಿಹತಾಶ್ಚ ಸರ್ವಶಃ ।
ಹತಾವಶಿಷ್ಟಾಸ್ತ್ವರಿತಾಃ ಪ್ರದುದ್ರುವುರ್ಭ್ರಾತುರ್ವಧಂ ಚೋಚುರುಪೇತ್ಯ ರಾವಣಮ್ ॥೮.೧೩೪॥
ಕುಂಭಕರ್ಣ ಸತ್ತ ನಂತರ ಅವನ ಅನುಯಾಯಿ ರಾಕ್ಷಸರೆಲ್ಲರೂ ಕಪಿಗಳಿಂದ ಕೊಲ್ಲಲ್ಪಟ್ಟರು. ಅಳಿದು ಉಳಿದ ಕೆಲ ರಾಕ್ಷಸರು ವೇಗದಲ್ಲಿ ಓಡಿ, ರಾವಣನ ಬಳಿ
ಬಂದು, ಅವನ ತಮ್ಮನ ಸಾವಿನ ವಿಷಯವನ್ನು ಆತನಿಗೆ
ಹೇಳಿದರು.
ನ ದುಃಖತಪ್ತೋ ನಿಪಪಾತ ಮೂ ರ್ಚ್ಛಿತೋ
ನಿರಾಶಕಶ್ಚಾಭವದಾತ್ಮಜೀವಿತೇ ।
ತಮಾಹ ಪುತ್ರಸ್ತ್ರಿದಶೇಶಶತ್ರುರ್ನ್ನಿಯುಙ್ಕ್ಷ್ವ
ಮಾಂ ಶತ್ರುವಧಾಯ ಮಾಚಿರಮ್ ॥೮.೧೩೫॥
ತಮ್ಮನ ಸಾವಿನ ವಾರ್ತೆಯನ್ನು ಕೇಳಿದ ರಾವಣನು ದುಃಖದಿಂದ ಮೂರ್ಛಿತನಾಗಿ ಬಿದ್ದನು. ಈ ರೀತಿ ಬದುಕುವ
ಬಯಕೆಯನ್ನೇ ಕಳೆದುಕೊಂಡ ಅವನನ್ನು ಕುರಿತು ಅವನ ಮಗನಾಗಿರುವ ಇಂದ್ರಜಿತುವು “ನನ್ನನ್ನು ಶತ್ರುವಿನ
ವದೆಗಾಗಿ ನಿಯೋಗಿಸು” ಎಂದು ಕೇಳಿಕೊಂಡನು.
ಮಯಾ ಗೃಹೀತಸ್ತ್ರಿದಶೇಶ್ವರಃ ಪುರಾ
ವಿಷೀದಸೇ ಕಿಂ ನರರಾಜಪುತ್ರತಃ ।
ಸ ಏವಮುಕ್ತ್ವಾಪ್ರಜುಹಾವ ಪಾವಕಂ
ಶಿವಂ ಸಮಭ್ಯರ್ಚ್ಚ್ಯ ಸಮಾರುಹದ್ ರಥಮ್ ॥೮.೧೩೬ ॥
“ನನ್ನಿಂದ ಹಿಂದೆ ದೇವತೆಗಳ ಸ್ವಾಮಿಯಾದ ಇಂದ್ರನೇ ಸೆರೆ
ಹಿಡಿಯಲ್ಪಟ್ಟಿದ್ದನು. ಹೀಗಿರುವಾಗ ಈ ಮನುಷ್ಯರ ಸ್ವಾಮಿಯಾದ ರಾಮನಿಂದ ಏಕೆ ದುಃಖ?” ಎಂದು ಹೇಳಿದ
ಇಂದ್ರಜಿತುವು, ಅಭಿಚಾರ ಮಂತ್ರಗಳಿಂದ ಅಗ್ನಿಯಲ್ಲಿ ಹೋಮ ಮಾಡಿ, ಶಿವನನ್ನು ಅರ್ಚಿಸಿ, ರಥವನ್ನೇರಿದನು.
ಕನ್ನಡ ಪದ್ಯರೂಪ:https://go-kula.blogspot.com/2018/07/8-132-136.html
No comments:
Post a Comment