ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 24, 2023

Mahabharata Tatparya Nirnaya Kannada 27-01-08

 

೨೭. ಕರ್ಣ್ಣವಧಃ

 

̐

ಅಥಾನುಜ್ಞಾಮುಪಾದಾಯ ದ್ರೌಣೇರ್ದ್ದುರ್ಯ್ಯೋಧನೋ ನೃಪಃ ।

ಕರ್ಣ್ಣಂ ಸೇನಾಪತಿಂ ಚಕ್ರೇ ಸೋSಗಾದ್ ಯುದ್ಧಾಯ ದಂಸಿತಃ ॥೨೭.೦೧॥

 

ದ್ರೋಣಾಚಾರ್ಯರು ಪರಲೋಕವನ್ನು ಹೊಂದಿದ ಮೇಲೆ, ಅಶ್ವತ್ಥಾಮಾಚಾರ್ಯರ ಅಣತಿಯನ್ನು ಪಡೆದು, ದುರ್ಯೋಧನನು ಕರ್ಣನನ್ನು ಸೇನಾಧಿಪತಿಯನ್ನಾಗಿ ಮಾಡಿದನು. ಕರ್ಣನು ಕವಚವನ್ನು ಧರಿಸಿ, ಯುದ್ಧಕ್ಕೆಂದು ತೆರಳಿದನು.

 

ತತ್ರಾಭವದ್ ಯುದ್ಧಮತೀವ ದಾರುಣಂ ಪಾಣ್ಡೋಃ ಸುತಾನಾಂ ಧೃತರಾಷ್ಟ್ರಜೈರ್ಗ್ಗಜೇ ।

ತತ್ರೋದಯಾದ್ರಿಪ್ರತಿಮೇ ಪ್ರದೃಶ್ಯತೇ ಭೀಮೋ ಯಥೋದ್ಯನ್ ಸವಿತಾSತಿನಿರ್ಮ್ಮಲಃ ॥೨೭.೦೨॥

 

ಅಲ್ಲಿ (ಹದಿನಾರನೇ ದಿವಸ) ಯುಧಿಷ್ಠಿರ ಮೊದಲಾದವರಿಗೂ, ದುರ್ಯೋಧನ ಮೊದಲಾದವರೊಂದಿಗೆ ಅತ್ಯಂತ ಭಯಂಕರವಾದ ಯುದ್ಧವಾಯಿತು. ಯುದ್ಧದ ಮಧ್ಯದಲ್ಲಿ ಉದಯಗಿರಿಯಂತೆ ಇರುವ ಆನೆಯ ಮೇಲೆ ಕುಳಿತಿರುವ ಭೀಮಸೇನನು ಸೂರ್ಯನಂತೆ ಕಂಗೊಳಿಸಿದನು.

 

ತಂ ಕಾಲಯನ್ತಂ ನೃಪತೀನ್ ಕ್ಷೇಮಧೂರ್ತ್ತಿರಭ್ಯಾಗಮತ್ ತಸ್ಯ ಗಜಂ ಜಘಾನ ಚ ।

ತಂ ವೀರ್ಯ್ಯಮತ್ತಂ ಪ್ರತಿಲಭ್ಯ ಭೀಮೋ ನಿನಾಯ ಮೃತ್ಯೋಃ ಸದನಾಯ ಶೀಘ್ರಮ್ ॥೨೭.೦೩॥

 

ಎಲ್ಲಾ ರಾಜರನ್ನೂ ಕೂಡಾ ಕೊಲ್ಲುತ್ತಿರುವ ಭೀಮಸೇನನನ್ನು  ಕ್ಷೇಮಧೂರ್ತಿಯು ಎದುರುಗೊಂಡ. ಅವನು ಭೀಮಸೇನನ ಆನೆಯನ್ನು ಸಂಹರಿಸಿದನು. ಭೀಮಸೇನನು ರಣೋತ್ಕಟನಾದ ಅವನನ್ನು ಎದುರುಗೊಂಡು ಶೀಘ್ರದಲ್ಲಿಯೇ ಯಮನ ಮನೆಗೆ ಕಳುಹಿಸಿದನು.

 

ನಿಹತ್ಯ ತಂ ಮಾರುತಿರಭ್ಯಕೃನ್ತಚ್ಛಿರಾಂಸಿ ಯೂನಾಂ ಪರಪಕ್ಷಪಾತಿನಾಮ್ ।

ವಿಕ್ಷೋಭಯಾಮಾಸ ಚ ಶತ್ರುಸೈನ್ಯಂ ಸಿಂಹೋ ಯಥೈವ ಶ್ವಸೃಗಾಲಯೂಥಮ್ ॥೨೭.೦೪॥

 

ಈರೀತಿಯಾಗಿ ಕ್ಷೇಮಧೂರ್ತಿಯನ್ನು ಕೊಂದ ಭೀಮಸೇನನು, ದುರ್ಯೋಧನನ ಪಕ್ಷದಲ್ಲಿರುವ ಯುವಕರ ತಲೆಗಳನ್ನು ಕತ್ತರಿಸುತ್ತಾ ಶತ್ರು ಪಡೆಯನ್ನು ಉಲ್ಲೋಲಕಲ್ಲೋಲಗೊಳಿಸಿದನು. ಹೇಗೆ ಸಿಂಹವೊಂದು ಬೇಟೆನಾಯಿಗಳ ಗುಂಪನ್ನು ವಿಕ್ಷೋಭಗೊಳಿಸುತ್ತದೋ, ಹಾಗೇ.  

 

ಸಙ್ಕ್ಷೋಭ್ಯಮಾಣಂ ತದನೀಕಮೀಕ್ಷ್ಯದ್ರೌಣೀ ರಥೇನ ಪ್ರತಿಜಗ್ಮಿವಾಂಸ್ತಮ್ ।

ತದ್ ಯುದ್ಧಮಾಸೀದತಿಘೋರಮದ್ಭುತಂ ಪುರಾ ಯಥಾ ನಾSಸ ಚ ಕಸ್ಯಚಿತ್ ಕ್ವಚಿತ್ ॥೨೭.೦೫॥

 

ಕೌರವ ಸೇನೆಯನ್ನು ಕದಡಿಸುತ್ತಿರುವ ಭೀಮಸೇನನನ್ನು ನೋಡಿ, ಅಶ್ವತ್ಥಾಮಾಚಾರ್ಯರು ರಥವನ್ನೇರಿ ಅವನನ್ನು ಹೊಂದಿದರು. ಅವರಿಬ್ಬರ ನಡುವೆ ನಡೆದ ಯುದ್ಧ ಅತ್ಯಂತ ಘೋರವೂ ಅದ್ಭುತವೂ ಆಗಿತ್ತು. ಹಿಂದೆ ಆರೀತಿಯ ಯುದ್ಧ ಎಲ್ಲಿಯೂ ಆಗಿರಲಿಲ್ಲ.

 

ದೃಷ್ಟ್ವೈವ ತದ್ ದೇವಗನ್ಧರ್ವವಿಪ್ರಾ ಊಚುರ್ನ್ನೇದೃಗ್ ದೃಷ್ಟಪೂರ್ವಂ ಸುಯುದ್ಧಮ್ ।

ನಚೋತ್ತರಂ ವಾSಪಿ ಭವಿಷ್ಯತೀದೃಕ್ ಕಲಾಂ ಚ ಸರ್ವಾಣಿ ನ ಷೋಡಶೀಮಿಯುಃ ॥೨೭.೦೬॥

 

ಆ ಯುದ್ಧವನ್ನು ಕಂಡ ದೇವತೆಗಳೂ ಗಂಧರ್ವರೂ ಋಷಿಗಳೂ ಹೇಳಿದರು- ‘ಈರೀತಿಯಾದ ಯುದ್ಧವನ್ನು ನಾವು ಹಿಂದೆ ಕಂಡಿಲ್ಲ, ಮುಂದೆಯೂ ಇಂತಹ ಯುದ್ಧ ನಡೆಯಲಾರದು. ಇತರ ಯಾವುದೇ ಭಯಂಕರ ಯುದ್ಧವೇನಿದೆ,  ಅದು ಈ ಯುದ್ಧದ ಹದಿನಾರನೇ ಒಂದು ಭಾಗವೂ ಅಲ್ಲ’.

 

ನೈತಾದೃಶೀ ಜ್ಞಾನಸಮ್ಪದ್ ಬಲಂ ವಾ ದ್ವಯಂ ಕುತೋ ವಾಯುಮೃತೇ ಶಿವಂ ತಥಾ ।

ದ್ವಯೋಃ ಸಮಾಹಾರ ಇಹ ದ್ವಯೋರಪಿ ಜ್ಞಾನಸ್ಯ ಬಾಹ್ವೋಶ್ಚ ಬಲಸ್ಯ ಸೂರ್ಜ್ಜಿತಃ ॥೨೭.೦೭॥

 

ಈರೀತಿಯಾದ ಬಲವಾಗಲೀ, ಜ್ಞಾನಸಂಪತ್ತಾಗಲೀ, ಮುಖ್ಯಪ್ರಾಣನನ್ನು ಬಿಟ್ಟರೆ ಶಿವನಲ್ಲಿಯೇ ಇರುವುದಲ್ಲವೇ. ಇವರಿಬ್ಬರಲ್ಲೂ ಕೂಡಾ ಅತ್ಯಂತ ಉತ್ಕಟವಾದ ಜ್ಞಾನ-ಬಲಗಳ ಸಮಾಹಾರವಿದೆ.

 

ಇತೀರ್ಯ್ಯಮಾಣೇ ವಿಬುಧೈರ್ನ್ನರೋತ್ತಮೌ ದಿಶಃ ಸಮಸ್ತಾ ಗಗನಂ ಚ ಪತ್ರಿಭಿಃ ।

ನಿರನ್ತರಂ ಚಕ್ರತುರುತ್ತಮೋಜಸೌ ದೃಷ್ಟ್ವೈವ ತದ್ ಭೀತಿಮಗುರ್ಮ್ಮಹಾರಥಾಃ ॥೨೭.೦೮॥

 

ಈರೀತಿಯಾಗಿ ದೇವತೆಗಳಿಂದ ಹೇಳಲ್ಪಡುತ್ತಿರಲು, ಜೀವರಲ್ಲೇ ಅಗ್ರಗಣ್ಯರಾದ, ಮುಖ್ಯಪ್ರಾಣ(ಭೀಮಸೇನ) ಹಾಗೂ ರುದ್ರ(ಅಶ್ವತ್ಥಾಮ)  ಅವರಿಬ್ಬರೂ ಕೂಡಾ ಬಾಣಗಳಿಂದ ಎಲ್ಲಾ ದಿಕ್ಕುಗಳನ್ನೂ, ಆಕಾಶವನ್ನೂ ಕೂಡಾ ಎಣೆಯಿಲ್ಲದಂತೆ ಮಾಡಿದರು. (ಎಲ್ಲಾ ಕಡೆ ಅವರ ಬಾಣಗಳೇ ಕಾಣುತ್ತಿತ್ತು) ಅದನ್ನು ನೋಡಿಯೇ ಅತಿರಥ ಮಹಾರಥರೆಲ್ಲರೂ ಭಯಗೊಂಡರು.

No comments:

Post a Comment