ಪತಿಂ ಸುಪೂರ್ಣ್ಣಯೌವನಂ
ನಿರೀಕ್ಷ್ಯತಾಂ ವಿಷಜ್ಜತೀಮ್ ।
ಉವಾಚ ಕಾರ್ಷ್ಣ್ಣಿರಮ್ಬ
ತೇ ಕುಚೇಷ್ಟಿತಂ ಕಥಂ ನ್ವಿತಿ ॥೧೭.೧೯೨॥
ಪೂರ್ಣಯೌವನವನ್ನು ಪಡೆದ ಮನ್ಮಥನನ್ನು ಕಂಡು ನಾಚಿಕೊಳ್ಳುತ್ತಿರುವ ರತಿಯನ್ನು ಕುರಿತು: ‘ಅಮ್ಮಾ, ಏಕೆ ಈರೀತಿ
ಕೆಟ್ಟಚೇಷ್ಟೆ ಮಾಡುತ್ತಿದ್ದೀಯಾ’ ಎಂದು ಕಾರ್ಷ್ಣಿ(ಕೃಷ್ಣಪುತ್ರನಾದ ಪ್ರದ್ಯುಮ್ನ)
ಪ್ರಶ್ನಿಸುತ್ತಾನೆ.
ಜಗಾದ ಸಾsಖಿಲಂ ಪತೌ ತದಸ್ಯ ಜನ್ಮ ಚಾsಗತಿಮ್ ।
ತತೋsಗ್ರಹೀತ್ ಸ ತಾಂ ಪ್ರಿಯಾಂ ರತಿಂ ರಮಾಪತೇಃ ಸುತಃ ॥೧೭.೧೯೩॥
ಪ್ರದ್ಯುಮ್ನನ ಪ್ರಶ್ನೆಗೆ ಉತ್ತರಿಸಿದ ರತಿ, ಅವನ ಜನ್ಮವನ್ನೂ, ಅವನು ಬಂದ
ಕಾರಣವನ್ನು, ಹೀಗೆ ಎಲ್ಲವನ್ನೂ ತನ್ನ ಗಂಡನಿಗೆ ಹೇಳಿದಳು. ತದನಂತರ
ಪರಮಾತ್ಮನ ಮಗನಾದ ಪ್ರದ್ಯುಮ್ನನು ರತಿಯನ್ನು ತನ್ನ ಪ್ರಿಯೆಯನ್ನಾಗಿ ಸ್ವೀಕರಿಸಿದನು.
[ಈ ಕುರಿತಾದ ವಿವರಣೆ ಹರಿವಂಶದಲ್ಲಿ(೧೦೪.೨೪-೨೫)
ಕಾಣಸಿಗುತ್ತದೆ: ‘ನ ತ್ವಂ ಮಮ ಸುತಃ ಕಾಂತ ನಾಪಿ ತೇ ಶಮ್ಬರಃ ಪಿತಾ । ....
ಪುತ್ರಸ್ತ್ವಂ ವಾಸುದೇವಸ್ಯ ರುಗ್ಮಿಣ್ಯಾನಂದವರ್ಧನಃ
। ದಿವಸೇ ಸಪ್ತಮೇ ಬಾಲೋ ಜಾತಮಾತ್ರೋsಪವಾಹಿತಃ’
ಇನ್ನು ಭಾಗವತದಲ್ಲೂ (೧೦.೬೮.೧೫) ಈ ವಿವರಣೆ ಕಾಣಸಿಗುತ್ತದೆ: ‘ಭವಾನ್
ನಾರಾಯಣಸುತಃ ಶಮ್ಬರೇಣಾsಹೃತೋ ಗೃಹಾತ್
। ಅಹಂ ತೇsಧಿಕೃತಾ ಪತ್ನೀ ರತಿಃ ಕಾಮೋ ಭವಾನ್
ಪ್ರಭೋ’]
ದದೌ ಚ
ಮನ್ತ್ರಮುತ್ತಮಂ ಸಮಸ್ತಮಾಯಿನಾಶಕಮ್ ।
ಭೃಗೂತ್ಥರಾಮದೈವತಂ
ರತಿರ್ಹರೇಃ ಸುತಾಯ ಸಾ ॥೧೭.೧೯೪॥
ರತಿಯು, ಎಲ್ಲಾ ಮಾಯೆಯನ್ನೂ ನಾಶಮಾಡುವ ಶಕ್ತಿಯುಳ್ಳ, ಪರಶುರಾಮನೇ ದೇವತೆಯಾಗಿರುವ, ಉತ್ಕೃಷ್ಟವಾದ ಮಂತ್ರವನ್ನು
ಪ್ರದ್ಯುಮ್ನನಿಗೆ ಕೊಟ್ಟಳು.
ತತಃ ಸ್ವದಾರಧರ್ಷಕಂ
ಸಮಾಹ್ವಯದ್ ಯುಧೇsಙ್ಗಜಃ ।
ಸ ಶಮ್ಬರಂ ಸ
ಚೈತ್ಯ ತಂ ಯುಯೋಧ ಶಕ್ತಿತೋ ಬಲೀ ॥೧೭.೧೯೫॥
ತದನಂತರ, ಪರಮಾತ್ಮನ ಅಂಗದಿಂದ ಹುಟ್ಟಿದ ಪ್ರದ್ಯುಮ್ನನು, ತನ್ನ ಹೆಂಡತಿಯನ್ನು ಇಷ್ಟು ದಿನ
ಬಲಾತ್ಕಾರ ಮಾಡಿದ ಶಮ್ಬರನನ್ನು ಹೊಂದಿ, ಅವನನ್ನು ಯುದ್ಧಕ್ಕೆ ಕರೆದನು.
ಶಕ್ತಿಯಿಂದ ಬಲಿಷ್ಠನಾಗಿ ಅವನೊಂದಿಗೆ ಯುದ್ಧಮಾಡಿದನು ಕೂಡಾ.
ಸ ಚರ್ಮ್ಮಖಡ್ಗಧಾರಿಣಂ
ವರಾಸ್ತ್ರಶಸ್ತ್ರಪಾದಪೈಃ ।
ಯದಾ ನ
ಯೋದ್ಧುಮಾಶಕದ್ಧರೇಃ ಸುತಂ ನ ದೃಶ್ಯತೇ ॥೧೭.೧೯೬॥
ಖಡ್ಗ ಹಾಗೂ ಚರ್ಮಧಾರಿಯಾಗಿರುವ, ಅಸ್ತ್ರ, ಶಸ್ತ್ರ,
ಪಾದಪಗಳಿಂದ ಯುದ್ಧಮಾಡುವ ಪರಮಾತ್ಮನ ಮಗನೊಂದಿಗೆ ಯುದ್ಧಮಾಡಲು ಶಮ್ಬರನು ಯಾವಾಗ ಸಮರ್ಥನಾಗಲಿಲ್ಲವೋ,
ಆಗ ಅವನು ತನ್ನ ಮಾಯಾವಿದ್ಯೆಯನ್ನು ಬಳಸಿ ಅದೃಶ್ಯನಾದನು.
ಸಹಸ್ರಮಾಯಮುಲ್ಬಣಂ
ತ್ವದೃಶ್ಯಮಮ್ಬರಾದ್ ಗಿರೀನ್ ।
ಸೃಜನ್ತಮೇತ್ಯ
ವಿದ್ಯಯಾ ಜಘಾನ ಕೃಷ್ಣನನ್ದನಃ ॥೧೭.೧೯೭॥
ಪ್ರದ್ಯುಮ್ನನು ಸಾವಿರಾರು ಕುಟಿಲ ವಿದ್ಯೆಗಳುಳ್ಳ, ಕಣ್ಣಿಗೆ ಕಾಣದೆ ಎಲ್ಲೋ ಆಕಾಶದಿಂದ
ಬಂಡೆಗಳನ್ನು ತನ್ನೆಡೆಗೆ ಎಸೆಯುವ ಶಮ್ಬರಾಸುರನನ್ನು, ರತಿಯಿಂದ ಕೊಡಲ್ಪಟ್ಟ ಪರಶುರಾಮ ದೇವಾತ್ಮಕವಾದ ವಿದ್ಯೆಯನ್ನು ಬಳಸಿ ಕೊಂದನು.
ಸ ವಿದ್ಯಯಾ
ವಿನಾಶಿತೋರುಮಾಯ ಆಶು ಶಮ್ಬರಃ ।
ನಿಕೃತ್ತಕನ್ಧರೋsಪತದ್ ವರಾಸಿನಾsಮುನಾ ಕ್ಷಣಾತ್ ॥೧೭.೧೯೮॥
ಆ ಶಮ್ಬರನು ತನ್ನ ಕುಟಿಲ
ವಿದ್ಯೆಗಳನ್ನೆಲ್ಲವನ್ನೂ ಕಳೆದುಕೊಂಡು, ಪ್ರದ್ಯುಮ್ನನ ಕತ್ತಿಯಿಂದ ಕತ್ತರಿಸಲ್ಪಟ್ಟ ಕತ್ತುಳ್ಳವನಾಗಿ
ಕೆಳಗೆ ಬಿದ್ದನು.
ನಿಹತ್ಯ ತಂ
ಹರೇಃ ಸುತಃ ತಯೈವ ವಿದ್ಯಯಾsಮ್ಬರಮ್ ।
ಸಮಾಸ್ಥಿತಃ
ಸ್ವಭಾರ್ಯ್ಯಯಾ ಸಮಂ ಕುಷಸ್ಥಲೀಂ ಯಯೌ ॥೧೭.೧೯೯॥
ಈರೀತಿ ಶಮ್ಬರನನ್ನು ಕೊಂದ ಪ್ರದ್ಯುಮ್ನನು, ಅದೇ ವಿದ್ಯೆಯನ್ನು
ಬಳಸಿ, ಆಕಾಶವನ್ನು ಏರಿ, ತನ್ನ
ಹೆಂಡತಿಯೊಂದಿಗೆ ಕೂಡಿಕೊಂಡು ದ್ವಾರಕೆಗೆ ತೆರಳಿದನು.
ಸಮಸ್ತವೇದಿನೋರ್ಮ್ಮುನಿರ್ನ್ನರಾನ್ ವಿಡಮ್ಬಮಾನಯೋಃ ।
ರಮಾರಮೇಶಯೋಃ
ಸುತಂ ಜಗಾದ ತಂ ಸ್ಮ ನಾರದಃ ॥೧೭.೨೦೦॥
ಎಲ್ಲವನ್ನೂ ಬಲ್ಲ, ನರರನ್ನು ಅನುಕರಿಸುತ್ತಿರುವ ರಮಾ-ರಮೇಶರಿಗೆ ನಾರದರು, ಪ್ರದ್ಯುಮ್ನ ಅವರ
ಮಗ ಎಂದು ಹೇಳಿದರು.
ಸ ರುಗ್ಮಿಣೀಜನಾರ್ದ್ದನಾದಿಭಿಃ ಸರಾಮಯಾದವೈಃ ।
ಪಿತಾಮಹೇನ ಚಾsದರಾತ್ ಸುಲಾಳಿತೋsವಸತ್ ಸುಖಮ್ ॥೧೭.೨೦೧॥
ಪ್ರದ್ಯುಮ್ನನು ರಾಮನಿಂದ ಕೂಡಿದ ಯಾದವರಿಂದ, ರುಗ್ಮಿಣಿ-ಜನಾರ್ದನ ಮೊದಲಾದವರಿಂದ,
ತಾತನಿಂದಲೂ(ವಸುದೇವನಿಂದಲೂ) ಕೂಡಾ ಅತ್ಯಂತ ಗೌರವಿಸಲ್ಪಟ್ಟು, ಸುಖವಾಗಿ ವಾಸಮಾಡಿದ.
No comments:
Post a Comment