ಕುಮಾರಾನ್ ಗ್ರಹಣೇಪ್ಸೂಮ್ಸ್ತಾನುಪಯಾತಾನುದೀಕ್ಷ್ಯ ಸಃ ।
ಅಕ್ಷೋಹಿಣೀತ್ರಿತಯಯುಙ್ ನಿಸ್ಸೃತೋ ದ್ರುಪದೋ ಗೃಹಾತ್ ॥೧೮.೬೩॥
ಆ ದ್ರುಪದರಾಜನು ತನ್ನನ್ನು ಹಿಡಿಯಬೇಕೆಂದು ಬಯಸಿ ಬಂದಿರುವ
ಕುಮಾರರನ್ನು ಕಂಡು, ಮೂರು ಅಕ್ಷೋಹಿಣಿ ಸೈನ್ಯದಿಂದ ಕೂಡಿದವನಾಗಿ
ಮನೆಯಿಂದ ಹೊರಬಂದನು.
ತೇ ಶರೈರಭಿವರ್ಷನ್ತಃ ಪರಿವಾರ್ಯ್ಯ ಕುಮಾರಕಾನ್ ।
ಅರ್ದ್ದಯಾಮಾಸುರುದ್ವೃತ್ತಾನ್ ಸ್ತ್ರಿಯೋ ಬಾಲಾಶ್ಚ ಸರ್ವಶಃ ॥೧೮.೬೪॥
ದ್ರುಪದನ ಸೈನಿಕರು ಈ ಕುಮಾರಕರನ್ನು ಸುತ್ತುವರಿದು ಬಾಣಗಳಿಂದ
ಪೀಡಿಸುತ್ತಾ, ನಲುಗಿ ಹೋಗುವಂತೆ ಮಾಡಿದರು. ಸೈನಿಕರಿಂದ ತಪ್ಪಿಸಿಕೊಂಡವರನ್ನು
ಸ್ತ್ರೀಯರು, ಬಾಲಕರು, ಎಲ್ಲರೂ ಕೂಡಾ
ಪೀಡಿಸಿದರು.
ಹರ್ಮ್ಯಸಂಸ್ಥಾಃ ಸ್ತ್ರಿಯೋ ಬಾಲಾ ಗ್ರಾವಭಿರ್ಮ್ಮುಸಲೈರಪಿ ।
ಅತ್ಯರ್ತ್ಥಮರ್ದ್ದಯಾಮಾಸುಃ ಕುಮಾರಾನ್ ಸುಸುಖೇಧಿತಾನ್ ॥೧೮.೬೫॥
ಅತ್ಯಂತ ಸುಖವಾಗಿ ಬೆಳೆದ ಈ ಕುಮಾರಕರನ್ನು ಮನೆಯಲ್ಲಿರತಕ್ಕಂತಹ
ಸ್ತ್ರೀಯರು, ಬಾಲರು, ಎಲ್ಲರೂ ಕೂಡಾ, ಕಲ್ಲುಗಳಿಂದಲೂ, ಒನಕೆಗಳಿಂದಲೂ, ಚನ್ನಾಗಿ
ಪೀಡಿಸಿದರು.
ದ್ರುಪದಸ್ಯ ವರೋ ಹ್ಯಸ್ತಿ ಸೂರ್ಯ್ಯದತ್ತಸ್ತಪೋಬಲಾತ್ ।
ಆ ಯೋಜನಾತ್ ಪುರಮುಪ ನ ತ್ವಾ ಜೇಷ್ಯತಿ ಕಶ್ಚನ ॥೧೮.೬೬॥
ದ್ರುಪದನಿಗೆ ತಪೋಬಲದಿಂದ ಸೂರ್ಯನಿಂದ ಕೊಟ್ಟ ವರವಿದೆ. ‘ನಗರದ ಒಂದು
ಯೋಜನದ ತನಕ ನಿನ್ನನ್ನು ಯಾರೂ ಗೆಲ್ಲುವುದಿಲ್ಲ’ ಎನ್ನುವ ವರ.
ಇತಿ ತೇನ ವರೇಣೈವ ಸುಖಸಂವರ್ದ್ಧಿತಾಶ್ಚ ತೇ ।
ಭಗ್ನಾಃ ಕುಮಾರಾ ಆವೃತ್ಯ ದುದ್ರುವುರ್ಯ್ಯತ್ರ ಪಾಣ್ಡವಾಃ ॥೧೮.೬೭ ॥
ಈರೀತಿಯಾದ ಆ ವರದಿಂದಲೂ ಜೊತೆಗೆ ಸುಖವಾಗಿ ಬೆಳೆದಿದ್ದ ಕಾರಣದಿಂದಲೂ, ಸೋಲುಂಡ ಕುಮಾರಕರು,
ತಿರುಗಿ ಪಾಂಡವರಿದ್ದಲ್ಲಿಗೆ ಓಡಿದರು.
ಸ್ತ್ರೀಬಾಲಾವೃದ್ಧಸಹಿತೈಃ ಪಾಞ್ಚಾಲೈರಪ್ಯನುದ್ರುತಾಃ ।
ಭೀಮಾರ್ಜ್ಜುನೇತಿ ವಾಶನ್ತೋ ಯಯುರ್ಯ್ಯತ್ರ ಸ್ಮ ಪಾಣ್ಡವಾಃ ॥೧೮.೬೮॥
ಸ್ತ್ರೀ-ಬಾಲ-ವೃದ್ಧರಿಂದ ಕೂಡಿರುವ ಸೈನಿಕರಿಂದ ಓಡಿಸಲ್ಪಟ್ಟ
ಅವರು, ‘ಭೀಮಾ’ ‘ಅರ್ಜುನಾ’ ಎಂದು ಕೂಗುತ್ತಾ ಪಾಂಡವರಿದ್ದಲ್ಲಿಗೆ ಬಂದರು.
No comments:
Post a Comment