ಹರೌ ತು
ಪುಷ್ಕರಂ ಗತೇ ಮುನೀಶ್ವರೈಃ ಸಮರ್ಚ್ಚಿತೇ ।
ಸಮೀಯತುಶ್ಚ
ತಾವುಭಾವಥಾತ್ರ ಹಂಸಡೀಭಕೌ ॥೧೭.೨೪೩॥
ಮುನಿಗಳಿಂದ ಕೂಡಿದ ಶ್ರೀಕೃಷ್ಣನು ಅರ್ಚಿತನಾಗಿ ಪುಷ್ಕರಕ್ಕೆ ಬರಲು, ಅಲ್ಲಿಗೆ ಹಂಸ-ಡಿಭಕರೂ
ಕೂಡಾ ಬಂದರು.
[ಇಲ್ಲಿ ನಾವು ಡೀಭಕ ಎನ್ನುವ
ನಾಮ ಪ್ರಯೋಗವನ್ನು ಕಾಣುತ್ತೇವೆ. ಯಾವರೀತಿ ‘ಹನುಮಾನ್’ ಹಾಗು ‘ಹನೂಮಾನ್’ ಎರಡೂ ಆಂಜನೇಯನನ್ನೇ
ಹೇಳುತ್ತವೋ, ಹಾಗೇ ಈ ಪ್ರಯೋಗವೂ ಕೂಡಾ. ಇದು ನಾಮ ವಿಭ್ರಾಂತವಷ್ಟೇ‘. ಅಥ ತಂ
ಹಂಸಡಿಭಯೋರ್ಶಯಾಮಾಸ ಸಾತ್ಯಕಿಮ್’ ಎನ್ನುವ
ಹರಿವಂಶದ ವಾಕ್ಯದಿಂದ ಇಲ್ಲಿ ಹೇಳಿರುವುದು ಡಿಭಕನ ಕುರಿತಾಗಿಯೇ ಎನ್ನುವುದು ಸ್ಪಷ್ಟವಾಗುತ್ತದೆ].
ಸ ಬ್ರಹ್ಮದತ್ತನಾಮಕೋsತ್ರ ತತ್ಪಿತಾsಪ್ಯುಪಾಯಯೌ ।
ಸಮಾಗತೌ ಚ
ಭೂತಕೌ ಶಿವಸ್ಯ ಯೌ ಪುರಸ್ಸರೌ ॥೧೭.೨೪೪॥
ಆ ಪುಷ್ಕರಕ್ಕೆ ಹಂಸ-ಡಿಭಕರ ತಂದೆಯಾದ ಬ್ರಹ್ಮದತ್ತನೂ(ಸಾಲ್ವನೂ) ಕೂಡಾ ಬಂದನು. ಶಿವನ ಎರಡು ಭೂತಗಳೂ(ಮಹೋದರ ಮತ್ತು
ಕುಣ್ಡಧಾರಿ) ಕೂಡಾ ಪುಷ್ಕರಕ್ಕೆ ಬಂದವು.
ವಿಚಕ್ರನಾಮಕೋsಸುರಃ ಪುರಾ ವಿರಿಞ್ಚತೋ ವರಮ್ ।
ಅವದ್ಧ್ಯತಾಮಜೇಯತಾಮವಾಪ್ಯ
ಬಾಧತೇ ಸುರಾನ್ ॥೧೭.೨೪೫॥
ಸ ಚಾಭವತ್
ತಯೋಃ ಸಖಾ ಸಹಾಯಕಾಮ್ಯಯಾssಗಮತ್ ।
ಹಿಡಿಮ್ಬರಾಕ್ಷಸೋsಪಿ ಯಃ ಪುರಾssಪ ಶಙ್ಕರಾದ್ ವರಮ್ ॥೧೭.೨೪೬॥
ನ ಜೀಯಸೇ ನ ವದ್ಧ್ಯಸೇ
ಕುತಶ್ಚನೇತಿ ತೋಷಿತಾತ್ ।
ಸ ಚೈತಯೋಃ
ಸಖಾsಭವತ್ ಸಮಾಜಗಾಮ ತತ್ರ ಚ ॥೧೭.೨೪೭॥
ಬ್ರಹ್ಮನಿಂದ ಅವಧ್ಯತ್ವವನ್ನೂ, ಅಜೇಯತ್ವವನ್ನೂ ಪಡೆದ ‘ವಿಚಕ್ರ’ ಎಂಬ ಅಸುರನೊಬ್ಬ,
ದೇವತೆಗಳನ್ನು ಪೀಡಿಸುತ್ತಿದ್ದ.
ಅವನಾದರೋ, ತನ್ನ ಗೆಳೆಯರಿಬ್ಬರಿಗೆ(ಹಂಸ-ಡಿಭಕರಿಗೆ) ಸಹಾಯ ಮಾಡಬೇಕೆಂಬ ಬಯಕೆಯಿಂದ ಅಲ್ಲಿಗೆ ಬಂದ.
ಹಿಡಿಮ್ಬನೂ ಕೂಡಾ ಬಂದ. ಈ ಹಿಡಿಮ್ಬ ಹಿಂದೆಯೇ ‘ಯಾರಿಂದಲೂ
ನೀನು ಸೋಲುವುದಿಲ್ಲ ಮತ್ತು ಕೊಲ್ಲಲ್ಪಡುವುದಿಲ್ಲ’ ಎಂದು ಸಂತುಷ್ಟನಾದ ಶಂಕರನಿಂದ
ವರವನ್ನು ಪಡೆದಿದ್ದ. ಅವನೂ ಕೂಡಾ ಇವರಿಬ್ಬರ ಗೆಳೆಯನಾಗಿದ್ದುದರಿಂದ ಪುಷ್ಕರಕ್ಕೆ ಬಂದ.
ಅಕ್ಷೋಹಿಣೀದಶಾತ್ಮಕಂ
ಬಲಂ ತಯೋರ್ಬಭೂವ ಹ ।
ವಿಚಕ್ರಗಂ
ಷಡಾತ್ಮಕಂ ತಥೈಕಮೇವ ರಾಕ್ಷಸಮ್ ॥೧೭.೨೪೮॥
ಹಂಸ-ಡಿಭಕರ ಹತ್ತು ಅಕ್ಷೋಹಿಣೀಯಾತ್ಮಕವಾಗಿರುವ ಸೈನ್ಯವೂ ಅಲ್ಲಿಗೆ
ಬಂದಿತು. ಜೊತೆಗೆ ವಿಚಕ್ರನ ಆರು ಅಕ್ಷೋಹಿಣಿ
ಮತ್ತು ಹಿಡಿಮ್ಬನ ಒಂದು ಅಕ್ಷೋಹಿಣಿ ಸೇನೆ ಕೂಡಾ ಬಂತು.
No comments:
Post a Comment