ತತೋ ದೇಹಾನ್ ಪ್ರಸಿದ್ಧಾನಾಂ ಪಾರ್ತ್ಥಾಃ ಸಮದಹನ್ ಸತಾಮ್ ।
ಅನ್ಯೇಷಾಂ ಧೃತರಾಷ್ಟ್ರಾದೀನ್
ಪುರಸ್ಕೃತ್ಯೈವ ಕಾಂಶ್ಚನ ।
ಸೂತೈಃ ಪಞ್ಚಭಿರೇವ
ಸ್ವೈಃ ಸರಸ್ವತ್ಯಾಂ ಪ್ರಚಿಕ್ಷಿಪುಃ ॥೨೮.೨೩೫॥
ತದನಂತರ ಪಾಂಡವರು
ಪ್ರಸಿದ್ಧರಾಗಿರುವ ಸಜ್ಜನರ ದೇಹಗಳನ್ನು ಸುಟ್ಟರು. ದುಷ್ಟರ ದೇಹಗಳನ್ನು ಧೃತರಾಷ್ಟ್ರ
ಮೊದಲಾದವರನ್ನು ಮುಂದೆ ಮಾಡಿಕೊಂಡು ಸುಡಿಸಿದರು. ಇನ್ನು ಕೆಲವರನ್ನು ತಮ್ಮ ಐದು ಜನ ಸಾರಥಿಗಳಿಂದ
ಸರಸ್ವತೀ ನದಿಯಲ್ಲಿ ಎಸೆಯುವಂತೆ ಮಾಡಿದರು.
ಸ್ನೇಹಾನ್ನೃಪೋ ಯಮೌ ಚ
ಸ್ವಾನ್ ನಾSಜೌ
ತಸ್ಮಿನ್ ಹ್ಯಯೋಜಯನ್ ।
ಶವಾಃ ಪ್ರಾಯೋ
ಬಹುತ್ವೇನ ತತ್ರತತ್ರೈವ ಸಂಸ್ಥಿತಾಃ ॥೨೮.೨೩೬॥
ಧರ್ಮರಾಜ, ನಕುಲ ಮತ್ತು ಸಹದೇವರು ತಮ್ಮ
ಸಾರಥಿಗಳನ್ನು ಪ್ರೀತಿಯಿಂದ ಆ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಿರಲಿಲ್ಲ. ಶವಗಳು ಬಹಳ
ಇದ್ದುದರಿಂದ ಕೆಲವು ಅಲ್ಲಲ್ಲೇ ಅವಶಿಷ್ಟವಾಗಿ ಬಿದ್ದಿದ್ದವು.
ತತೋ ದದತ್ಸು ಪಾನೀಯಂ
ಗಙ್ಗಾಯಾಂ ಸ್ವಜನಸ್ಯ ತು ।
ಪೃಥಾ ಕರ್ಣ್ಣಾಯ
ದತ್ತೇತಿ ಪಾರ್ತ್ಥಾನಾಹಾಗ್ರಜಂ ಚ ತಮ್ ॥೨೮.೨೩೭॥
ತತೋ ಹಾಹೇತಿ ವಿಲಪನ್
ರಾಜಾ ಪರಮದುಃಖಿತಃ ।
ಶಶಾಪ ಸರ್ವನಾರೀಣಾಂ
ಗುಹ್ಯಂ ಹೃದಿ ನ ತಿಷ್ಠತು ॥೨೮.೨೩೮॥
ತದನಂತರ ಪಾಂಡವರು ಗಂಗೆಯಲ್ಲಿ
ತಮ್ಮವರಿಗೆ ತರ್ಪಣವನ್ನು ಕೊಡುತ್ತಿರಲು, ಕುಂತಿಯು ‘ಕರ್ಣನಿಗೂ ತರ್ಪಣ ಕೊಡಿ’ ಎಂದು ಹೇಳಿ, ‘ಕರ್ಣ ಪಾಂಡವರಲ್ಲಿ ಅಗ್ರಜ’ ಎನ್ನುವ
ರಹಸ್ಯವನ್ನು ಹೇಳಿದಳು.
ಈ ಮಾತನ್ನು ಕೇಳಿದ
ಧರ್ಮರಾಜ ಬಹಳ ಬೇಗುದಿಯಿಂದ ಕೂಡಿದವನಾಗಿ, ಹಾ..ಹಾ.. ಎಂದು ಪ್ರಲಾಪಮಾಡುತ್ತಾ, ‘ಎಲ್ಲಾ ಹೆಣ್ಣುಮಕ್ಕಳ
ಹೃದಯದಲ್ಲಿ ರಹಸ್ಯವು ನಿಲ್ಲದಿರಲಿ’ ಎಂದು ಶಪಿಸಿದನು.
ಹಾ ಮಾತಸ್ತವ ಧೃತ್ಯೈವ
ವಯಂ ಸರ್ವೇ ಭೃಶಂ ಹತಾಃ ।
ಜ್ಯೇಷ್ಠಂ ಪಿತೃಸಮಂ
ಹತ್ವಾ ಪ್ರತಿಪತ್ಸ್ಯಾಮ ಕಾಂ ಗತಿಮ್ ॥೨೮.೨೩೯॥
ಪ್ರಲಾಪಿಸುತ್ತಾ
ಧರ್ಮರಾಜ ಹೇಳುತ್ತಾನೆ- ‘ಎಲೈ ತಾಯಿಯೇ, ನಿನ್ನ ಅತಿಯಾದ ಧೈರ್ಯದಿಂದ ನಾವೆಲ್ಲರೂ ನಾಶವಾದೆವು(ಪಾಪಕ್ಕೆ ತುತ್ತಾದೆವು). ತಂದೆಗೆ
ಸಮನಾಗಿರುವ ಹಿರಿಯಣ್ಣನನ್ನು ಕೊಂದು ನಾವು ಯಾವ ಗತಿಯನ್ನು ಹೊಂದಿಯೇವು?’
ಏವಂ ವದನ್ತಂ ಕೌನ್ತೇಯಂ
ವಾಸುದೇವಃ ಸನಾರದಃ ।
ಶಮಯಾಮಾಸ ಸದ್ವಾಕ್ಯೈರ್ಗ್ಗುಣಾನ್
ಕರ್ಣ್ಣಸ್ಯ ಚಾಬ್ರವೀತ್ ॥೨೮.೨೪೦॥
ಈರೀತಿಯಾಗಿ ಪ್ರಲಾಪಿಸುತ್ತಿರುವ
ಧರ್ಮರಾಜನನ್ನು ನಾರದರಿಂದ ಕೊಡಿದ ಶ್ರೀಕೃಷ್ಣನು ಒಳ್ಳೆಯ ಮಾತುಗಳಿಂದ ಸಮಾಧಾನ ಮಾಡಿದನು. ಕರ್ಣನ ಗುಣಗಳನ್ನೂ
ಅವರು ಹೇಳಿದರು.
ತತಸ್ತೇ ಪ್ರೇತಕಾರ್ಯ್ಯಾಣಿ
ಚಕ್ರುಃ ಸರ್ವೇSಪಿ
ಸರ್ವಶಃ ।
ಸರ್ವೇಷಾಮಾಧಿರಾಜ್ಯೇ ಚ
ಸ್ಥಿತೋSಭೂತ್
ಪಾಣ್ಡವಾಗ್ರಜಃ ॥೨೮.೨೪೧॥
ತದನಂತರ ಅವರೆಲ್ಲರೂ ಪ್ರೇತಕಾರ್ಯಗಳನ್ನು
ಮಾಡಿದರು. ಪಾಂಡವರ ಅಗ್ರಜನಾದ ಧರ್ಮರಾಜನು ಎಲ್ಲರ ರಾಜನಾಗಿ(ಚಕ್ರವರ್ತಿಯಾಗಿ) ಅಭಿಷಿಕ್ತನಾಗಿ,
ಅಧಿಕೃತವಾಗಿ ಮತ್ತೆ ನಿಯುಕ್ತನಾದನು.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವರಾಜ್ಯಲಾಭೋನಾಮ ಅಷ್ಟಾವಿಂಶೋSದ್ಧ್ಯಾಯಃ ॥
[ ಆದಿತಃ ಶ್ಲೋಕಾಃ ೪೪೪೧+೨೪೧=೪೬೮೨ ]
*********
No comments:
Post a Comment