೨೯. ಸಮಸ್ತಧರ್ಮ್ಮಸಙ್ಗ್ರಹಃ
ಓ̐ ॥
ಯದೈವ ಕೃಷ್ಣೌ
ಸಕಲಾಧಿರಾಜ್ಯೇ ಯುಧಿಷ್ಠಿರಂ ಯೌವರಾಜ್ಯೇ ಚ ಭೀಮಮ್ ।
ವಿಪ್ರೈರ್ಯ್ಯುತಾವಭಿಷಿಚ್ಯಾSಶಿಷಶ್ಚ ಯುಕ್ತಾ ದತ್ವಾ ಹರ್ಷಯಾಮಾಸತುಸ್ತೌ
॥ ೨೯.೦೧ ॥
ತದೈವ ಚಾರ್ವಾಕ ಇತಿ
ಪ್ರಸಿದ್ಧಂ ರಕ್ಷಸ್ತ್ರಿದಣ್ಡೀ ಯತಿರೇವ ಭೂತ್ವಾ ।
ಯುಧಿಷ್ಠಿರಂ
ಗರ್ಹಯಾಮಾಸ ವಿಪ್ರಾಸ್ತ್ವಾಂ ಗರ್ಹಯನ್ತೀತಿ ಸುಪಾಪಶೀಲಮ್ ॥ ೨೯.೦೨ ॥
ಬ್ರಾಹ್ಮಣರಿಂದ
ಕೂಡಿಕೊಂಡ ವೇದವ್ಯಾಸರು ಮತ್ತು ಶ್ರೀಕೃಷ್ಣ, ಚಕ್ರವರ್ತಿಯಾಗಿ ಯುಧಿಷ್ಠಿರನನ್ನೂ, ಯುವರಾಜನಾಗಿ ಭೀಮಸೇನನನ್ನೂ
ಅಭಿಷೇಕ ಮಾಡುವ ಮೂಲಕ, ವಿಧಿಬದ್ಧವಾಗಿ ಧೀಕ್ಷೆಯನ್ನು ಕೊಟ್ಟು, ಆಶೀರ್ವದಿಸಿದರು.
ಯಾವಾಗ ಅವರನ್ನು ಸಂತೋಷಗೊಳಿಸಿದರೋ, ಆವಾಗ ಚಾರ್ವಾಕ
ಎಂದು ಪ್ರಸಿದ್ಧವಾದ ರಾಕ್ಷಸನು ತ್ರಿದಣ್ಡೀ ಸನ್ಯಾಸಿಯಾಗಿ ಬಂದು, ‘ಅತ್ಯಂತ ಪಾಪಿಷ್ಠನಾದ
ನಿನ್ನನ್ನು ಎಲ್ಲಾ ಬ್ರಾಹ್ಮಣರು ನಿಂದಿಸುತ್ತಿದ್ದಾರೆ’ ಎಂದು ಹೇಳಿ ಯುಧಿಷ್ಠಿರನನ್ನು ಬೈದನು.
ಶ್ರುತ್ವೈವ ತದ್
ದುಃಖಿತಮಾಶು ಧರ್ಮ್ಮಜಂ ದೃಷ್ಟ್ವಾ ವಿಪ್ರಾಃ ಶೇಪುರಮುಂ ಭೃಶಾರ್ತ್ತಾಃ ।
ಅಗರ್ಹಿತಂ
ನಿತ್ಯಮಸ್ಮಾಭಿರೇನಂ ಯತೋSವೋಚೋ ಗರ್ಹಿತಮದ್ಯ ಪಾಪ ।
ಭಸ್ಮೀಭವಾSಶ್ವೇವ ತತಸ್ತ್ವಿತೀರಿತೇ
ಕ್ಷಣಾದಭೂತ್ ಪಾಪತಮಃ ಸ ಭಸ್ಮಸಾತ್ ॥ ೨೯.೦೩ ॥
ಆ ಮಾತನ್ನು ಕೇಳಿದೊಡನೆ
ಅತ್ಯಂತ ಖತಿಗೊಂಡ ಧರ್ಮರಾಜನನ್ನು ಕಂಡ ಬ್ರಾಹ್ಮಣರು, ಬಹಳ ದುಃಖಗೊಂಡು, ಯತಿವೇಷದಲ್ಲಿ ಬಂದ ಆ
ರಾಕ್ಷಸನನ್ನು ಶಪಿಸಿದರು. ‘ಎಲೈ ಪಾಪಿಷ್ಠನೇ, ನಮ್ಮಿಂದ ನಿತ್ಯದಲ್ಲಿಯೂ ನಿಂದಿಸಲ್ಪಡದ ಈ
ರಾಜನನ್ನು, ನಮ್ಮಿಂದ ನಿಂದಿಸಲ್ಪಟ್ಟವನು ಎಂದು ಯಾವ ಕಾರಣದಿಂದ ಸುಳ್ಳು ಹೇಳುತ್ತಿರುವೆಯೋ, ಆ ಕಾರಣದಿಂದ ಕೂಡಲೇ ಬಸ್ಮವಾಗಿ ಹೋಗು’ – ಈ ರೀತಿಯಾಗಿ ಹೇಳಲು,
ಕ್ಷಣದಲ್ಲಿ ಆ ಪಾಪಿಷ್ಠನಾದ ಚಾರ್ವಾಕನು ಬಸ್ಮವಾದನು.
ಭಸ್ಮೀಕೃತೇSಸ್ಮಿನ್ ಯತಿವೇಷಧಾರಿಣಿ
ಯುಧಿಷ್ಠಿರಂ ದುಃಖಿತಂ ವೃಷ್ಣಿಸಿಂಹಃ ।
ಪ್ರೋವಾಚ ನಾಯಂ
ಯತಿರುಗ್ರಕರ್ಮ್ಮಾ ಸುಯೋಧನಸ್ಯೈವ ಸಖಾ ಸುಪಾಪಃ ॥ ೨೯.೦೪ ॥
ರಕ್ಷೋಧಮೋSಯಂ ನಿಹತೋSದ್ಯ ವಿಪ್ರೈಸ್ತನ್ಮಾ ಶುಚಃ ಕೃತಕಾರ್ಯ್ಯೋSಸಿ ರಾಜನ್ ।
ಇತೀರಿತಃ ಶಾನ್ತಮನಾಃ ಸ
ವಿಪ್ರಾನ್ ಸನ್ತರ್ಪ್ಪಯಾಮಾಸ ಧನೈಶ್ಚ ಭಕ್ತ್ಯಾ ॥
೨೯.೦೫ ॥
ಯತಿವೇಷವನ್ನು
ಧರಿಸಿರುವ ಚಾರ್ವಾಕನು ಸುಟ್ಟುಹೋಗಲು, ದುಃಖಿತನಾಗಿರುವ ಯುಧಿಷ್ಠಿರನನ್ನು ಕಂಡು ಶ್ರೀಕೃಷ್ಣನು ‘ಬಸ್ಮವಾಗಿರುವ ಇವನು
ಸನ್ಯಾಸಿ ಅಲ್ಲ, ಕ್ರೂರಕರ್ಮವುಳ್ಳ ಸುಯೋಧನನ ಗೆಳೆಯನಾಗಿರುವ ರಾಕ್ಷಸನಿವನು. ಹಾಗಾಗಿ ಬ್ರಾಹ್ಮಣರಿಂದ
ಸಾಯಿಸಲ್ಪಟ್ಟಿದ್ದಾನೆ. ಓ, ರಾಜನೇ, ನೀನು ಏನು
ಮಾಡಬೇಕೋ ಅದನ್ನು ಮಾಡಿರುವೆ. ಆ ಕಾರಣದಿಂದ ದುಃಖಿಸಬೇಡ.’ ಈ ರೀತಿಯಾಗಿ ಹೇಳಲ್ಪಟ್ಟ ಯುಧಿಷ್ಠಿರ ಶಾಂತಮನಸ್ಕನಾಗಿ
ಬ್ರಾಹ್ಮಣರನ್ನು ಭಕ್ತಿಯಿಂದ, ದ್ರವ್ಯದಿಂದ ಸಂತೋಷಗೊಳಿಸಿದನು.
[ಮಹಾಭಾರತ ಶಾಂತಿಪರ್ವ-
ರಾಜಾನಂ ಬ್ರಾಹ್ಮಣಚ್ಛದ್ಮಾ ಚಾರ್ವಾಕೋ ರಾಕ್ಷಸೋSಬ್ರವೀತ್ । ತತ್ರ ದುರ್ಯೋಧನಸಖಾ ಭಿಕ್ಷುರೂಪೇಣ ಸಂವೃತಃ । ಸಾಂಖ್ಯಃ ಶಿಖೀ ತ್ರಿದಂಡೀ ಚ
ಧೃಷ್ಟೋ ವಿಗತಸಾಧ್ವಸಃ (೩೭.೨೨-೨೩)]
No comments:
Post a Comment